Sunday, 1 August 2021

ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ

ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ಪ


ನರ ಬಾ ನೀ ಯೆಂದೆಳೆವಳಾಸೆ ಹೃದಯೇಶನಂ

ಬರಸೆಳೆವಳಾ ಲಜ್ಜೆ ತನ್ನ ಕಡೆಗೆ

ಹರಿಹರಿ ಡೋಲಾಯಮಾನವಾದುದು ಚಿತ್ತ

ಸ್ಥಿರವ ಕರುಣಿಸು ಲಕ್ಷ್ಮಿಯರಸ ಶ್ರೀಕೃಷ್ಣಾ 1


ನಾಲಿಗೆಗೆ ದೈನ್ಯಮಂ ತಹಳಾಶೆ ಆ ಲಜ್ಜೆ

ತಾಳಿಗೆಯನೊಣಗಿಸೀ ನುಡಿಯಲೀಯಳೋ

ಪೇಳಲೇನುಭಯಸಂಕಟ ಸೀಗೆಯೊಳಗಿರ್ದ

ಬಾಳೆಯಾದುದು ಚಿತ್ತ ಪರಿಹರಿಸು ಕೃಷ್ಣಾ 2


ಆಶೆಯಾ ಸವತಿಯಂ ಕೆಡಿಸಬಗೆವಳು ಲಜ್ಜೆ

ಆ ಸವತಿಯಂ ಕೆಡಿಸಬಗೆವಳೆಂತೊ

ಗಾಸಿಯಾದುದು ಚಿತ್ತವಿಬ್ಬರಿಂ ವೈಕುಂಠ

ಕೇಶವಾ ಮನದ ಸಂಸಾರವಂ ಬಿಡಿಸಯ್ಯ 3

***


No comments:

Post a Comment