Sunday, 1 August 2021

ಏನು ಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಏನುಕಾರಣ ಯೆನಗೆ ತಿಳಿಯದಿದೇಕೋ

ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ


ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ

ಭರದಿಂದ ಕಲ್ಲು ಮಳೆಯನು ಕರೆಯಲಾಗ

ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ

ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ 1


ದುರಿತ ಭವ ತಿಮಿರ ಶರಧಿಯದಾಂಟಿಸುವ ವೋಲು

ಸುರಿವ ಮಳೆಗತ್ತಲೆಗೆ ಬೋವಿಯಾಗಿ

ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ

ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು 2


ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ

ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು

ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ

ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ 3

***


No comments:

Post a Comment