Friday, 3 September 2021

ಶಿವ ಶಿವಯನ್ನಿ ಮನದೊಳೂ ಹರಹರಯನ್ನಿ ಸಾಂಬಸದಾಶಿವ ankita gurumahipati SHIVA SHIVAYENNI MANADOLU HARA HARA ENNI SAAMBASADASHIVA



BY ಕಾಖಂಡಕಿ ಶ್ರೀ ಕೃಷ್ಣದಾಸರು

ಶಿವ ಶಿವಯನ್ನಿ ಮನದೊಳೂ ಹರಹರಯನ್ನಿ ಪ 

ಸಾಂಬಸದಾಶಿವ ಶಂಭುವೆ ಎನ್ನಿ  ಅಂಬಿಕಾರಮಣ ತೃಯಂಬಕ ನೆನ್ನಿ 1 

ಗಂಗಾಧರ ಜಿತ - ನುಂಗನುಯನ್ನಿ ಮಂಗಳಮಹಿಮ ಸಿತಾಂಗನುಯನ್ನಿ2 

ಅದ್ರಿನಿವಾಸ ಕಪರ್ದಿಯೆಯನ್ನಿ ರುದ್ರಗುಣದ ಸಮುದ್ರನೆಯನ್ನಿ3 

ಆಗಮ ವೇದ್ಯ ವಿರಾಗಿಯೆಯನ್ನಿ ಭೋಗ ಭೂಷಣ ಮಹಾಯೋಗಿಯೆಯನ್ನಿ4 

ಸುರಮುನಿಧೇಯ ಸುಚರಣನುಯನ್ನಿ ಗುರುಮಹಿಪತಿಪ್ರಭು ಕರುಣನುಯನ್ನಿ 5

***


No comments:

Post a Comment