Friday, 27 December 2019

ಬಿಡುವೇನೇಯ್ಯಾ ಹನುಮ ನಿನ್ನ ಬಿಡುವೇನೇಯ್ಯಾ ankita venkata vittala BIDUVENAYYA HANUMA NINNA BIDUVENAYYA


ಬಿಡುವೇನೇಯ್ಯಾ ಹನುಮ ನಿನ್ನ ಬಿಡುವೇನೇಯ್ಯಾ ||ಪ||

ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ ಧೃಢ ಭಕ್ತಿ ಸುಜ್ಞಾನವನ್ನು ತಡಮಾಡದಲೆ ಕೊಡುವೋ ತನಕ ||ಅ||

ಹಸ್ತವ ಮ್ಯಾಲಕೆ ಎತ್ತಿದರೇನು ಹಾರಗಾಲ ಹಾಕಿದರೇನು ಭೃತ್ಯನು ನಿನ್ನವನು ನಾನು ಹಸ್ತಿ ವರದನ ತೋರೋ ತನಕ ||೧||

ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲ ಫುಲ್ಲನಾಭ ಲಕುಮಿಲೋಲನ ಇಲ್ಲಿಗೆ ತಂದು ತೋರುವ ತನಕ ||೨||

ಡೊಂಕು ಮೋರೆ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ ಕಿಂಕರನು ನಿನ್ನವನೋ ನಾನು ವೆಂಕಟವಿಠಲ ನ ತೋರುವ ತನಕ ||೩||
************

No comments:

Post a Comment