Friday 6 August 2021

ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು ಮೋಕ್ಷದಾ ಮಾರ್ಗವು ಅವಗಿಲ್ಲವು ankita bheemashankara

 ...

 kruti by ಭೀಮಾಶಂಕರರು ದಾಸರು bheemashankara


ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ


ಮೋಕ್ಷ ಲಕ್ಷ್ಮಿಯುಂಟು | ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1


ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2


ಶಾಂತಿ ಸತಿಯಳು ಉಂಟು ಮತಿಯು ಪುತ್ರರು ಉಂಟು | ಅಂತ್ಯಕಾಲಕ್ಕೆ ರಾಮನಾಮ ಉಂಟು | ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3


ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4


ಬ್ರಹ್ಮ ಪದವುಂಟು ವಾ ಬ್ರಾಹ್ಮಣರ ದಯವುಂಟು | ಬ್ರಹ್ಮಾಂಡದೊಳಗೆ ಸಂದೇಹವುಂಟು | ಬ್ರಹ್ಮಾಹಮಸ್ಮಿಯುಂಟು | ಬ್ರಹ್ಮವೇ ತಾನುಂಟು | ಭೀಮಾಶಂಕರ ಭಿಕ್ಷೆ ಬೇಡಲುಂಟು 5

***


No comments:

Post a Comment