kruti by ಗುರುಗೋವಿಂದಠಲ (ಮೈಸೂರು)
ರಾಗ: ಮಧ್ಯಮಾವತಿ ತಾಳ: ಅಟ
ಬೆಳಕಾ ತೋರಿಸೊ ಯೋಗೀಂದ್ರರ ಜನಕಾ
ಮಂತ್ರಾಲಯ ಪುರ ಪಾಲಕ ಪ
ಫಾಲನಯನ ಪ್ರಿಯ ಪಾಲಾಬ್ಭಿ ಶಾಯಿಯ
ಶೀಲ ಮೂರುತಿ ತೋರೊ ಮೇಲು ಕರುಣದಿ ಅ.ಪ.
ಭರ್ಮೋದರಸುತ ಸುರಮುನಿಯಿಂದಾ ಉಪದೇಶದಿಂದಾ
ಕರ್ಮಜ ದೇವರ್ಕಗಳ ಮಹವೃಂದಾ ಮಧ್ಯದಿ ನಲವಿಂದಾ
ಊರ್ಮಿಳ ಪತಿ ಭ್ರಾತೃ ಪೇರ್ಮೆಯಿಂದಲಿ ನಿನ್ನ
ನಿರ್ಮಮತೆಗೆ ಮೆಚ್ಚಿ ಪರ್ಮನ ಮಾಡಿದ 1
ಅನಲಾ ಭೃಗು ಪ್ರಸೂತಿಗಳಿಗೇ ಅವರಿಗೆ ಸಮನಾಗೇ
ಅನಿಲಾನಿಂದಾವೇಶಿತನಾಗೇ ಬಾಲ್ಹೀಕನಾಗೇ
ನಿನ್ನ ತನುವು ಭೂಸ್ಪರ್ಶವಾಗಲು ಆ
ಕ್ಷಣದಲಿ ಬಿರಿಯಿತು ತತ್ ಕ್ಷಿತಿ ದೇಶವು 2
ಸಿರಿ ಗುರುಗೋವಿಂದವಿಠ್ಠಲನಾ ಭವ್ಯ ಸುಚರಣಾ
ಸರಸಿಜ ಹೃದ್ವಾರಿಜದಲಿ ಪವನಾನಲಿ ಸ್ಥಿತನಾಗಿಹನಾ
ತೋರಿ ಪೊರೆಯೊ ಕರುಣಾಕರ ಗುರು
ಸಾರಿ ಭಜಿಪೆ ತವ ಚರಣಾಂಬುರುಹವ 3
****
No comments:
Post a Comment