ರಾಗ - : ತಾಳ -
ಎಂದು ಕಾಂಬೆನು ತಂದೆ ಪಂಢರಿ ವಿಟ್ಠಲರಾಯನೆ
ಬಂದು ನಿನ್ನಯ ಸುಂದರಾಕೃತಿ ಎಂದು ನೋಡುವೆ ll ಪ ll
ದಾಸ ಜನರಾ ಕ್ಲೇಶ ಹರಿಪಾ ದೋಷ ದೂರಾನೇ
ದೋಷಿ ಎನ್ನನು ಪೋಷಿಸೂವುದು ಸಹಸ್ರನಾಮಾನೇ ll 1 ll
ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಯ ಮೆಟ್ಟಿ ನಿಂತಾನೇ
ಪುಟ್ಟನಾಗುತ ಮೆಟ್ಟಿ ಬಲಿಯನು ಕಷ್ಟ ಕಳೆದಾನೇ ll 2 ll
ಕಾವ ಕೊಲ್ಲುವ ಬೋವ ಬಂಡಿಗೆ ಯಾವನೀತನೇ
ಓವಿ ಭಜಿಸಲು ಕಾವ ಗುರುಗೋವಿಂದವಿಟ್ಠಲನೇ ll 3 ll
***
No comments:
Post a Comment