Sunday, 1 August 2021

ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ

ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ


ಕರದಲ್ಲಿ ದಂಡ ಕೋಲು ಕಮಂಡಲನೀವ

ಪರಿ ಹೇಗೆ ದಾಸಾನುದಾಸನಲ್ಲ

ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ

ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ 1


ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ

ನಿನ್ನ ಬಾಲಬ್ರಹ್ಮಚಾರಿಯೆಂದು

ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ

ಇನ್ನದಕುಪಾಯವೇನಯ್ಯ ಚೆನ್ನಿಗರಾಯ 2


ಶೃಂಗಾರಗಳನು ತತ್ವಂಗಳನು ಪೇಳುವಡೆ

ಗುಂಗುರುಹಿನೊಳಲ್ಪ ಮನುಜನಲ್ಲ

ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ

ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ 3

***


No comments:

Post a Comment