Wednesday, 1 September 2021

ಮೊದಲೆ ಪಾಲಿಸೆನ್ನ ಮೊದಲಗಟ್ಟಿ ಹನುಮನೆ ankita bheemesha krishna

 ..

ಮೊದಲೆ ಪಾಲಿಸೆನ್ನ ಮೊದಲಗಟ್ಟಿ ಹನುಮನೆ

ಮುದದಿ ಜಾನಕಿಗೆ ಮುದ್ರೆಯಿಟ್ಟ ವಾನರನೆ ಪ


ದಶರಥಾತ್ಮಜನ ಬಳಿಗೆ ವಾರಿಧಿನ್ಹಾರಿ ವಸುಧೆ

ಕುಶಲವಾರ್ತೆ ತಂದಸುರನ ದಶಶಿರಗಳ ಧ್ವಂಸಮಾಡಿದ 1


ಕೀಚಕಾದಿ ಮಗಧ ದುಶ್ಶಾಸ(ನ) ದುರುಳ ದುರ್ಯೋಧನರ

ನಾಶಮಾಡಿದಂಥ ಭಾರತೀಶ ಭಾಳ ದಯವನಿಟ್ಟು 2


ವಂದಿಸುವೆನು ಶ್ರೀಮದಾನಂದತೀರ್ಥರಾಗಿ ನಂದನ

ಕಂದ ಭೀಮೇಶ ಕೃಷ್ಣನರವಿಂದ ಪಾದಕ್ವಂದಿಸುವನೆ 3

***


No comments:

Post a Comment