ಕಾಖಂಡಕಿ ಶ್ರೀ ಮಹಿಪತಿರಾಯರು
ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ಪ
ಮನದಾವದು ಎಂದರಿಯದೆ ಖೂನ ಘನದಾವವೆಂದರಿಯದು ಧ್ಯಾನ ಧ್ಯಾನ ಮೋನ ಯಾತಕದೇನ ಅನುಭವರಿಯದೆ ಮರುಳಜನ 1
ಮೂಲದಲಿಡದೆ ಠಾವಿಲಿ ಮನ ಜ್ಯಾಲವ್ಯಾತಕೆ ಬರೇ ಮಾತಿನ ಕೀಲ ತಿಳಿಯದೆ ಸದ್ಗುರು ಜ್ಞಾನ ನೆಲಿಯುಗೊಂಬುದೆ ನಿಜಸಾಧನ 2
ಮನದಲಿ ಮನಸಿನ ತಿಳಿವದು ಬಿಟ್ಟು ಜನವನ ತಿರುಗುದೆ ಕೆಟ್ಟು ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3
***
No comments:
Post a Comment