Wednesday 1 September 2021

ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ಪ  


ಹಿಂಡುದೈವಕೆ ಪ್ರಚಂಡಮೂರ್ತಿ ಕೊಂಡಾಡುವ ನಿಮ್ಮ ಅಖಂಡ ಕೀರ್ತಿ 1 

ಭಾವಭೋಕ್ತ ದೇವೋತ್ತಮ ಸೇವಿಸುವೆ ನಿಮ್ಮ ದಿವ್ಯನಾಮ 2 

ಜಯ ಜಯ ಆನಂದ ಕಂದ ಧ್ಯಾಯಿಸುವೆ ನಿಮ್ಮ ಪಾದಾರವಿಂದ 3 

ದಯಾಸಿಂಧು ದೇವ ದೇವ ಕಾಯೋ ಮಹಿಪತಿ ಪ್ರಾಣಜೀವ 4

***


No comments:

Post a Comment