ankita ಲಕುಮೀಶ
ರಾಗ: [ಕಮಾಚ್] ತಾಳ: [ಆದಿ]
ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ ಪ
ಬಂದಾ ಭಕುತರ ಪಾಪವೃಂದವ ಕಳೆದು ಆನಂದ
ನಂದನತೋರಿ ನಂದವಗರೆವ ಗುರು ಅ ಪ
ಧರೆಯ ಚೋರಾರಿ ಸುತೆಯಾದ ತುಂಗಾನದಿಯ
ತೀರದಿ ರಾಜಿಪ ವರ ಮಂತ್ರಸದನದಿ ಹರಿಯ ಧ್ಯಾನಿಸುತ
ನೆರೆನಂಬಿ ತುತಿಪರ ಕರುಣಾದಿ ಪೊರೆಯಲು 1
ದುರಿತವೆಂಬುವ ಸರ್ಪಕೇ ಗುರುರಾಜಾ
ಗರುಡನೆಂದರಿಯೋ ಮನುಜ ಮರೀಯದವರ
ಚರಣವಾರಿಜಗಳ ಸ್ಮರಿಸುವರಾ ಭವಶರಧಿ ದಾಟಿಸಲೀಗಾ 2
ತನಯರಿಲ್ಲದ ಜನರು ಯತಿರಾಜರ
ಮನಮುಟ್ಟಿ ಸೇವಿಸಲು ಘನತನಯರ ಇತ್ತು ಅನು-
ದಿನ ರಕ್ಷಿಸಿ ಇನಕುಲೇಶನ ಒಲಿಸಿ ಹನುಮನಾವೇಶದಿ 3
ಹಲವು ಕ್ಷೇತ್ರಗಳೇತಕೇ ಎಲೆ ಮರುಳೇ
ಸುಲಭ ಮುಕ್ತಿಗೆ ಈತನು ಒಲಿಯುತ ನಲಿಯುತ
ಫಲನೀವ ಸುರತರು ಸುಜನರಭೀಷ್ಟ ಫಲವೀವ ಓಡ್ಯೋಡಿ 4
ಶ್ರೀಸುಯಮೀಂದ್ರಯತಿವರ ತಪಸಿಗೆ ಮೆಚ್ಚಿ
ನಸುನಗುತಲಿ ಒಲಿದು ರಾಶಿಮಹಿಮೆ ಪ್ರಕಾಶದಿ ತೋರುತ
ಬಿಸಜಾಕ್ಷ ಲಕುಮೀಶ ವಾಸುದೇವನ ಧ್ಯಾನದಿ 5
***
No comments:
Post a Comment