ankita ಲಕುಮೀಶ
ರಾಗ: [ಶುದ್ಧಸಾವೇರಿ] ತಾಳ: [ತ್ರಿಪುಟ]
ಪಾಲಿಸುವದು ಎನ್ನ ಪಾವನ್ನ ಶ್ರೀ ಗುರು ಪರಿ-
ಮಳಾರ್ಯನೆ ರನ್ನ ನಿರ್ದಯವ ಮಾಡದೆ
ಕೇಳೊ ಮೊರೆ ನೀ ಮುನ್ನ ನಂಬಿದೆನೊ ನಿನ್ನ
ಕೇಳೋ ವಿಷಯದ ಸುಖ ಸಮುದ್ರದಿ
ಏಳಲಾರದೆ ಬಾಧೆ ಬಡುವೆನು
ಗೋಳು ಅಂತಕನಿಂದ ಬಿಡಿಸಿ
ಶ್ರೀಲೋಲನಂಘ್ರಿಯ ತೋರಿ ಗುರುವರ ಪ
ಆಚಾರಗಳ ನಾ ಬಿಟ್ಟೆ ಜೀವೇಶ ಸರ್ವಜ್ಞ
ಆಚಾರ್ಯರ ಗ್ರಂಥಗಳಾ ಗುಟ್ಟೆ ಕ್ಷಣ ಕಾಲಾವಾದರು
ಯೋಚಿಸದಲೆ ನಾ ಕೆಟ್ಟೆ ಭವದೊಳಗೆ ಅನುದಿನ
ನಾಚಿಕಿಲ್ಲದೆ ವ್ಯಥೆಪಟ್ಟೆ ಬವಣೆ ಇನ್ನಿಷ್ಟೆ
ತೋಚದಾಯಿತು ಗುರುವೆ ನಿನ್ನೊಳು
ಯಾಚಿಸುವೆ ಸಂತಸದಿ ಸಂತತ
ಕೀಚಕಾರಿ ಪ್ರಿಯನ ದಾಸ್ಯ ವಿವೇಚನೆಯ ಕೊಟ್ಹರುಷದಲಿ 1
ಅಕ್ಷಮ್ಯ ಅಪರಾಧಿಯ ಕ್ಷಮಿಸುತಲಿ ತಂದೆಗೆ
ಪಕ್ಷಿವಾಹನನಂಘ್ರಿಯ ಸ್ತಂಭದಲಿ ತೋರುತ
ಮೋಕ್ಷ ಕೊಡಿಸಿದೆ ಜೀಯ ಪಿಡಿ ಎನ್ನ ಕೈಯ್ಯ
ದಕ್ಷಿಣಾದ್ರಿಯ ಅರಸ ಇತ್ತಂತ
ಅಕ್ಷಯ ಬೆಲೆ ಸರಕೆ ಕೋಪಿಸೆ
ತಕ್ಷಣ ಜ್ವಾಲೆಯೊಳು ಹಸ್ತದಿ
ಲಕ್ಷವಿರುತಿರೆ ಸರವನಿತ್ತವ 2
ದುಷ್ಟಾನ್ನಗಳ ನಾಸವಿದು ಪರವನಿತೆಯರ ಕಂಡು
ಕೆಟ್ಟ ಭಾವನೆ ಕವಿದು ಹಿಂದಾದ ಜನ್ಮಗ-
ಳೆಷ್ಟಂಬುದನ್ನೇ ಮರೆದು ಇದ್ದೆನ್ನ ಕರೆದು
ಕುಟ್ಟಿ ಅಘಗಳ ಥಟ್ಟನೋಡಿಸಿ
ಶಿಷ್ಟಜನರೊಡನಿಟ್ಟು ಶುಭಮತಿ
ಕೊಟ್ಟು ಶ್ರೀ ಲಕುಮೀಶನಂಘ್ರಿಯೋಳ್
ದೃಷ್ಟಿ ಚಲಿಸದ ಭಾಗ್ಯ ಕೊಡುತಲಿ 3
***
No comments:
Post a Comment