Wednesday, 16 October 2019

ವಂದೇ ಮುಕುಂದ ನಮೊ ನಂದ ಮೂರುತಿ ankita vijaya vittala

ವಿಜಯದಾಸ

ರಾಗ – ನಾಟಿ : ತಾಳ – ಝಮ್ಪೆತಾಳ


ವಂದೇ ಮುಕುಂದ ನಮೋ l ವಂದೇ ಮುಕುಂದ ನಮೋ l 

ವೃಂದಾರಕೇಶ ನಮೊ l

ನಂದಮೂರುತಿ ಪರಮಾನಂದ ನರಸಿಂಹಾ ll ಪ ll


ಬಿಸಜಪೀಠನ ವರವ ಪಡೆದು ಮಹಾರಾಜೇಂದ್ರ l

ವಸುಮತಿಗೆ ತಾನೆ ಸ್ವಾಮಿ ಎಂದು ll

ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ l

ಮಿಸಣಿಪಕಂಭದಿ ಬಂದ ಭಳಿರೆ ನರಸಿಂಹಾ ll 1 ll


ರೋಷವನೆ ತಾಳಿ ನಿಟ್ಟುಸುರ ಗೈಸಿಕೊಳುತಾ

ಸೂಸಿ ಕಿಡಿಗಳನುದುರೆ ಕುಪ್ಪಳೀಸುತ ಕಮ ll

ಲಾಸನಾದ್ಯರ ಪಾಲಿಸಿದ ನರಸಿಂಹಾ ll 2 ll


ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ l

ಗಜಪಗೀಯ ಮೊಗನೆ ಆನಂದ ಮಗನೇ ll

ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ l

ವಿಜಯವಿಟ್ಠಲ ನರದಾತೀರ ನರಸಿಂಹಾ ll 3 ll

***


ವಂದೇ ಮುಕುಂದ ನಮೊ |
ನಂದ ಮೂರುತಿ ಪರಮಾನಂದ ನರಸಿಂಹಾ ಪ

ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ |
ವಸುಮತಿಗೆ ತಾನೆ ಸ್ವಾಮಿ ಎಂದು ||
ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ |
ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ 1

ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ |
ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ ||
ಲಾಸನಾದ್ಯರ ಪಾಲಿಸಿದ ನರಸಿಂಹಾ 2

ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ |
ಗಜಪಗೀಯ ಮೊಗನೆ ಆನಂದ ಮಗನೇ ||
ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ |
ವಿಜಯವಿಠ್ಠಲ ವರದಾತೀರ ನರಸಿಂಹ 3
***


No comments:

Post a Comment