Monday, 6 September 2021

ಸೇವಿಸು ನೀ ಮಂತ್ರಸದನಾದಿರುತಿಹನ ಯತಿವರನ ಯತಿವರನ ಪ್ರತಿದಿನ ankita shreekara vittala

 ankita ಶ್ರೀಕರವಿಠಲ  

ರಾಗ: ಭೀಮ್‍ಪಲಸ್ ತಾಳ: ಆದಿ


ಸೇವಿಸು ನೀ ಮಂತ್ರಸದನಾದಿರುತಿಹನ ಯ-

ತಿವರನ ಯತಿವರನ ಪ್ರತಿದಿನ


ಸಾಗಿಬಾಯೆಂದು ಕೂಗಿಕರೆಯಲತಿ-

ವೇಗದಿ ಬರುವ ಚೆನ್ನಾಗಿ ಘನ-

ತ್ಯಾಗಿ ಘನತ್ಯಾಗಿ ವರಯೋಗಿ 1

ದಂಡಕಾಷಾಯಕಮಂಡಲಭೂಷಿತ

ತಂಡತಂಡದ ಸೇವೆಕೊಳುತ ತಾನಿರುತ

ಬಲುಖ್ಯಾತ ಬಲುಖ್ಯಾತ ವರದಾತ 2

ಭವಶರಧಿಗೆ ಅನುಭವನಾವಿಕನಿವ

ಪವನನಯ್ಯನ ಸ್ತುತಿಸುವ ಮನವೀವ

ಅಘತರಿವ ಅಘತರಿವ ತಾ ಪೊರೆವ 3

ತುಂಗಾತಟದಿಹ ಸಂಗೀತಪ್ರಿಯ

ಮಂಗಳಕರ ಮೃದುಹೃದಯ ಕೇಳ್ಮೊರೆಯ

ಘನದಯ ಘನದಯ ಎಮ್ಮದೊರೆಯ 4

ಶ್ರೀಕರವಿಠಲನ ಸ್ವೀಕೃತ ಆಜ್ಞದಿ

ಈ ಕಲಿಯುಗದಿ ತಾ ಬರೆವಸುಕೃತವ

ಮಾಡಿದವ ಮಾಡಿದವ ತಾ ನಂಬುವ 5

***


No comments:

Post a Comment