subodhendra teertha rayara mutt yati stutih
ರಾಗ : ಪೂರ್ವೀ ತಾಳ : ಏಕ
ಅಭಯವೀಗಲೇ ಬೇಡೆ । ಗುರು ।
ಸುಬೋಧೇಂದ್ರಾರ್ಯರ -
ನೋಡೆ ಸಖಿ ।। ಪಲ್ಲವಿ ।।
ಪಾಪ ಕಳೆವಳಾಕಾಶ -
ಗಂಗೆ । ಬಹು ।
ತಾಪ ಕಳೆವ ದ್ವಿಜನಾಥ ।
ಆ ಪಾದಪ ದೈನ್ಯ ಹರೀ -
ಸುಗುಣವು ।
ಈ ಪುರುಷರಿಗೊಪ್ಪುವುದಲ್ಲೇ -
ಸಖಿ ।। ಚರಣ ।।
ಮೀನಾ ಕೂರ್ಮ ದ್ವಿಜ -
ನೋಡಿ ಸ್ಮರಿಸಿ ಮುಟ್ಟಿ ।
ಸೂನುಗಳನು ಸಲಹುವ ತೆರದಿ ।
ಸು ನೋಟದಿ ನೆನೆದು -
ಪಾದಸ್ಪರ್ಶ । ವಿ ।
ತ್ತಾನುತರನು ಪೋರೆವರು -
ಬಿಡದೆ ಸಖಿ ।। ಚರಣ ।।
ಈ ಸಂಯಮಿಗಳ
ಕೃಪೆಯೊಂದಿರುತಿರೆ ।
ಏನು ಸಾಧನ ಇನ್ನೇತಕೆಲೆ ।
ನಾಶ ವೈಕುಂಠವೇ ಸರಿ । ಪ್ರಾ ।
ಣೇಶವಿಠ್ಠಲ ನಿವರಲ್ಲಿಹದಕೆ -
ಸಖಿ ।। ಚರಣ ।।
****
No comments:
Post a Comment