Wednesday, 1 September 2021

ಏನು ದಾಸ ನಾನು ಹರಿಯೆ ನೀನು ಮೆಚ್ಚುವೆಯೇನೊ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಏನು ದಾಸ ನಾನು ಹರಿಯೆ ನೀನು ಮೆಚ್ಚುವೆಯೇನೊ ಪ


ಏನು ಮಾಡಿದರೇನು ನಿನ್ನಯ

ಖೂನವರಿದೆನೇನೊ ಹರಿಯೆ ಅ.ಪ


ಲೋಕ ವಾರ್ತಿ ಎಲ್ಲ ಜರಿದು ಏಕ ಚಿತ್ತವಿಲ್ಲ

ಕಾಕು ಪೋಕರ ನೀಕರಿ ನಿನ್ನ ಸ್ವೀಕರಿಸಲಿಲ್ಲ ಬರಿದೆ 1


ನಿನ್ನ ಮಹಿಮೆಯನ್ನು ಕೇಳಿ ನಿನ್ನ ರೂಪವಿನ್ನು ಮನದಣಿಯೆ ನೋ

ಡೆನ್ನ ಮರೆಯದೆನ್ನ ದಾಸ್ಯವಿನ್ನು ಬರಿದೆ 2


ಭಾವ ತಿಳಿಯಲಿಲ್ಲ ಗುರುಗಳ ಸೇವೆ ಮಾಡಲಿಲ್ಲ

ಧಾವತಿಗೊಂಡೆ ಕೇವಲ ವಾಸುದೇವವಿಠಲ ಬರಿದೆ 3

***


No comments:

Post a Comment