Monday, 11 November 2019

ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ankita ramesha

by ಗಲಗಲಿಅವ್ವನವರು
ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ಆಣಿಯಿಟ್ಟುಓಡಿದ್ಯಾತಕೆ ನೀರೆ ಪ

ಬಿಂಕಬಿಡಿಸಿಕೊಂಡೆವೆಂದುದ್ರೌಪತಿ ಶಂಕಿಸಿಕೊಂಡೆ ನೀರೆಪಂಕಜಾಕ್ಷಿ ರುಕ್ಮಿಣಿ ಮುಂದೆಕಿಂಕರಳೆನ್ನು ಬಾರೆ ನೀರೆ 1

ಸೋಗೆಗಣ್ಣಿನ ಭದ್ರೆ ನೀನುಆಣಿಇಟ್ಟ ಬಗೆಯೆ ನಮಗೆನಾಗವೇಣಿ ರುಕ್ಮಿಣಿ ಮುಂದೆಮೂಗಿನ ಗೆರೆಯ ತೆಗಿಯೆ 2

ಇಟ್ಟ ಆಣೆತಪ್ಪಿಗೆಕೈಯ ಕಟ್ಟಿಕೊಂಡು ಬಾರೆಕೊಟ್ಟು ಬಿರುದು ಸೋತೆವೆಂದುಅಟ್ಟಾಸದಲಿ ಸಾರೆ 3

ಪಂಥ ಕಳೆದುಕೊಂಡಿರೆಂದುಎಂಥ ನಗುತಾರಲ್ಲಇಂಥಮಾನಭಂಗವಾಗಿ ನಿಂತಿರ್ಯಾತಕೆ ಇಲ್ಲೆನೀವು ಕುಳಿತಿರ್ಯಾತಕೆ ಇಲ್ಲೆ 4

ಸೋತೆವಮ್ಮ ನಿಮಗೆರಮಿನಾಥನರಸಿಗೆ ಎಂದುರುಕ್ಮಿಣಿಗೆ ನೀತಿಲೆಜಯಪತ್ರಕೊಟ್ಟು ದ್ರೌಪತಿ ಎರಗಿದಳು 5
*******

No comments:

Post a Comment