ಕಾಖಂಡಕಿ ಶ್ರೀ ಕೃಷ್ಣದಾಸರು
ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ ಪ
ತಂತ್ರಸಾರದಿಂದ ಪೂಜೆ ಮಂತ್ರದಿಂದ ಮಾಡಿ ಡಂಭ | ಯಂತ್ರದೊಳಗ ಸಿಲ್ಕ ಸಿಂತ್ರ ಹೋದರಲ್ಲದೇ 1
ಶಾಸ್ತ್ರವನೋದಿ ಹೇಳಿ ನಿಸ್ತರಿಸಿ ವಾದದಿಂದ | ದುಸ್ತರ ಹಮ್ಮಿನೊಳಗಸ್ತ ವಾದರಲ್ಲದೇ 2
ಇದ್ದು ಉಪವಾಸದಿಂದ ಉಗ್ರತಪವ ಮಾಡಿ | ಸಿದ್ಧಿಗಳ ತೋರಿ ಮೆರೆದು ಬಿದ್ದು ಹೋದರಲ್ಲದೇ 3
ಹಲವು ಕರ್ಮಗಳ ಮಾಡಿ ಫಲವ ಬೇಡಿಕೊಂಡು ತನ್ನ | ಘಳಿಕೆಯ ಸಂಸಾರದಿ ಕಳೆದುಕೊಂಡರಲ್ಲದೇ 4
ಇಂದಿರೆಪತಿಯ ಮನದಿಂದ ಅರಿತು ಪೂಜಿಸುವ | ತಂದೆ ಮಹಿಪತಿ ಪ್ರಭು ಹೊಂದಿದವರಲ್ಲದೇ 5
***
No comments:
Post a Comment