ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಹೊಳೆವುತದೆ ಸುಚಿನ್ಹಬೋಧ ತಂದಿ ಕಂಡೆವೇನೊ ಸದ್ಗುರು ಶ್ರೀಪಾದ P
ಪ್ರಾಣದೊಡಿಯ ಬಾವ್ಹಾಂಗನೇನೊ ಪೂರ್ಣಕ್ಷಣಕೊಮ್ಮಾಗುತದೆ ಸುಶಕುನ ಕಣ್ಹುಬ್ಬಾರುತದೆ ಬಲದೆನ್ನ ಚೆನ್ನಾಗ್ಯಾಗಮ್ಮ ತಾನೇನೊ ಸುಪ್ರಸನ್ನ 1
ತೋಳಭುಜಹಾರುತದೆ ಬಲುಬಹಳ ವ್ಯಾಳ್ಯಕೊದಗಿಬಂದೆನೇನೊ ದಯಾಳ ಸುಳವುದೋರುತದೆ ನಿಶ್ಚಳ ಸುಳಿದೊಮ್ಮೆ ಬಂದನೇನೊ ಕೃಪಾಳ 2
ಬುದ್ಧಿ ಮನಸಿಗಾಗುತದೆ ವಿಕಾಸ ಸಿದ್ಧಿಸೋರುವ್ಹಾಗಾದೆ ಪ್ರಕಾಶ ಸದ್ಯ ಹೃದಯವಾಗುತದೆ ಉಲ್ಹಾಸ ಸಾಧ್ಯವಾಗುವ್ಹಾಂಗ್ಹಾನೇನೊ ತಾ ಸರ್ವೇಶ 3
ಪ್ರೇಮ ಉಕ್ಕಿಬರುದೆನ್ನೊಳಗೆ ಸ್ವಾಮಿದರುಷಣಾದೀತೇನೊ ತಾ ಈಗ ರೋಮರೋಮವು ಬಿಡದೆ ಎನಗೆ ಬ್ರಹ್ಮಾನಂದ ಭಾಸುತದೇನೊ ಬ್ಯಾಗ 4
ಖೂನದೋರಿಬರುತದೆನಗೊಂದು ಭಾನುಕೋಟಿ ತೇಜ ತಾ ಬಾವ್ಹಾಂಗಿಂದು ದೀನ ಮಹಿಪತಿಗುರು ಕೃಪಾಸಿಂಧುಮನೋಹರ ಮಾಡುವ್ಹಾಂಗ್ಹಾನೆ ಬಂದು 5
****
No comments:
Post a Comment