Wednesday 1 September 2021

ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ 


ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 

ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 

ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3

*** 


No comments:

Post a Comment