ಕಾಖಂಡಕಿ ಶ್ರೀ ಕೃಷ್ಣದಾಸರು
ರಾಗ - : ತಾಳ -
ನಂಬು ದಯಾನಿಧಿ ರಾಮನಾ ll ಪ ll
ಶಬರಿಯ ಭಾವಕೆ ಮೆಚ್ಚಿ ಉಂಡನು ಬದರಿ ಫಲಾ l
ವಿಭು ನೀಡಿದನು ಪದಾಚಲಾ ll 1 ll
ತೃಣ ಪಶು ಪಿಪ್ಪೀಲಿಕಾ ನಗಾದಿಗಳಾ l
ಸುಗತಿಗೆ ವೈದನು ಘನ ನೀಲಾ ll 2 ll
ಗುರು ಮಹಿಪತಿ ಪ್ರಭು ನೀರೊಳು ತಾರಿಸಿದ ಶಿಲಾ l
ಚರಿತವ ದೋರಿದ ಸಿರಿಲೋಲ ll 3 ll
***
ನಂಬು ದಯಾನಿಧಿ ರಾಮನಾ ಪ
ಶಬರಿಯ ಭಾವಕೆ ಮೆಚ್ಚಿ ಉಂಡನು ಬದರಿ ಫಲಾ| ವಿಭು ನೀಡಿದನು ಪದಾಚಲಾ 1
ತೃಣ ಪಶು ಪಿಪ್ಪೀಲಿಕಾ ನಗಾದಿಗಳಾ| ಸುಗತಿಗೆ ವೈದನು ಘನ ನೀಲಾ 2
ಗುರು ಮಹಿಪತಿ ಪ್ರಭು ನೀರೊಳು ತಾರಿಸಿದ ಶಿಲಾ| ಚರಿತವ ದೋರಿದ ಸಿರಿಲೋಲಾ 3
***
No comments:
Post a Comment