ಆಚಾರ್ಯ ನಾಗರಾಜು ಹಾವೇರಿ ಶಬ್ದಗಳಲ್ಲಿ ಶ್ರೀ ನರಹರಿ "
ಮಹದಾದಿದೇವ ಮಹಧರ್ಮ ವಿವರ್ಧಕ ನಮೋ ।
ಮಹಾತತ್ತ್ವದಯ್ಯನೆ ನಮೋ ನಮೋ ।। ಪಲ್ಲವಿ ।।
ಮಹಾ ಕಾಲ ನಿಯಾಮಕ ।
ಮಹಾ ಮಂತ್ರರಾಜ ನಮೋ ।
ಮಹಾಮಾಯೆ ನಲ್ಲ ।
ಮಹಾ ರೋಗ ನಿವಾರಕ
ನಮೋ ನಮೋ ।। ಚರಣ ।।
ಮಹೀಸುರರ ಪ್ರಿಯ
ಮಂತ್ರಗಮ್ಯ ನಮೋ ।
ಮಹಾ ವಟು ಮಹಾ ದುರಿತ
ನಿವಾರಕ ನಮೋ ನಮೋ ।। ಚರಣ ।।
ಪ್ರಹ್ಲಾದ ಬಾಹ್ಲೀಕ ವ್ಯಾಸ
ರಾಘವೇಂದ್ರ ವರದಾ ನಮೋ ।
ಆಹ್ಲಾದದಾಯಕ ವೇಂಕಟನಾಥ
ನಮೋ ನಮೋ ।। ಚರಣ ।।
***
ವಿವರಣೆ :
ಮಹದಾದಿದೇವ = ಶ್ರೀ ನೃಸಿಂಹದೇವರು
" ಮಹಧರ್ಮ ವಿವರ್ಧಕ "
ಶ್ರೇಷ್ಟವಾದ ಧರ್ಮವನ್ನು ವೃದ್ಧೀಕರಿಸುವವನು ( ಸರ್ವೋತ್ತಮನಾದ ಶ್ರೀ ಹರಿ )
" ಮಹತ್ತತ್ತ್ವದಯ್ಯನೆ "
ಶ್ರೀ ವಾಯುದೇವರ ಮತ್ತು ಶ್ರೀ ಚತುರ್ಮುಖ ಬ್ರಹ್ಮದೇವರ ತಂದೆಯಾದ ಶ್ರೀ ಹರಿ
" ಮಹಾ ಕಾಲ ನಿಯಾಮಕ "
ಪ್ರಳಯ - ಸೃಷ್ಟ್ಯಾದಿ ಮಹಾ ಕಾಲಗಳಿಗೆ ನಿಯಾಮಕನು ( ಶ್ರೀಹರಿ )
" ಮಹಾ ಮಂತ್ರರಾಜ "
ಅಷ್ಟಾಕ್ಷರ ಮೊದಲಾದ ಶ್ರೇಷ್ಠ ಮಂತ್ರಗಳ ಸ್ವರೂಪಿ ಶ್ರೀಮನ್ನಾರಾಯಣ
ಮಹಾಮಾಯೆ = ಶ್ರೀ ಮಹಾಲಕ್ಷ್ಮೀಯರು
ಮಹೀಸುರರು = ಬ್ರಾಹ್ಮಣರು
" ಮಂತ್ರಗಮ್ಯ "
ತಂತ್ರಸಾರ ಮತ್ತು ಪುರಾಣಗಳಲ್ಲಿ ಬಂದ 74 ಪರಮ ಶ್ರೇಷ್ಠ ಮಂತ್ರಗಳಿಗೆ ದೊರಕುವವನೂ - ಮಹಾ ಮಹಾತ್ಮರ ರಹಸ್ಯವೋಪದೇಶಗಳಿಂದ ತಿಳಿಯಲ್ಪಡತಕ್ಕವನೂ ಶ್ರೀ ಹರಿ!
ಮಹಾವಟು = ಶ್ರೀ ವಾಮನ ರೂಪಿ ಶ್ರೀಮನ್ನಾರಾಯಣ
" ಶ್ರೀ ಪ್ರಹ್ಲಾದರಾಜರ ಸಂದೇಶ "
ಪ್ರ = ಪ್ರಕೃಷ್ಟವಾದ
ಹ್ಲಾದ = ಸಂತೋಷ
ಶ್ರೀ ಪ್ರಹ್ಲಾದಾರಾಜರ ಅವತಾರಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪಾದ ಪದ್ಮಗಳನ್ನು ಗಟ್ಟಿಯಾಗಿ ಯಾರು ಹಿಡಿಯುತ್ತಾರೋ ಅಂಥಾ ಶ್ರೀ ರಾಯರ ನಿಜ ಭಕ್ತನಿಗೆ ಶ್ರೀ ಹರಿಯು ಪರಮ ಪ್ರಕೃಷ್ಟವಾದ, ನಿತ್ಯ ಸುಖವಾದ " ಮೋಕ್ಷ ಸುಖ " ವನ್ನು ಕರುಣಿಸುತ್ತಾನೆ!!!
***
No comments:
Post a Comment