Wednesday, 1 September 2021

ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ankita mahipati

 ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಪ 


ಅನುಭವಕಾಗುವ ಚಂದ ಸ್ವಾನುಭವದÀ ಕಂದ ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ 1 

ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ ನಂತಾನಂತಕೆ ಸಂತತ ನೀನೆ ಏಕಾಂತ ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ 2 

ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ ಲೇಸುಲೇಸಾಗಿಹ ಆತ್ಮನುಭವ ಖೂನ ಈಶ ನೀನೊಬ್ಬನಾಗಿಹ ಅನುದಿನ ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ 3

***


No comments:

Post a Comment