..
kruti by ವೀರನಾರಾಯಣ Veeranarayana
ಒಲಿಯುವೆ ನೀನೆಂತು ಹಲಧರಾನುಜಾ ಪ
ಹೊಗಳಲು ನೀ ಮರುಳಾಗುವನಲ್ಲಾತೆಗಳಲು ನೀ ಮುನಿಯುವನಲ್ಲಾಹೊಗಳಲ್ಯೊ ತೆಗಳಲ್ಯೊ ತಿಳಿಯುವುದಿಲ್ಲಬಗೆಯನು ತೋರಲು ಹೇಳಸೊಲ್ಲ 1
ಪಂಚಪಕ್ವಾನ್ನವ ಹಂಚೇನೆಂದರೆಲಂಚಗುಳಿಯು ನೀನಲ್ಲಚಂಚಲಮನದವ ತಾನಾಗಿಹನೈಹಂಚಿಕೆಯನು ಹೇಳ್ ನಿತ್ಯತೃಪ್ತನೆ 2
ಧನವ ಕೊಟ್ಟು ನಿನ್ನೊಲಿಸೇನೆಂದರೆಧನಲಕ್ಷ್ಮಿ ಪತಿ ನೀನಹುದೋಘನತರ ಗದುಗಿನ ವೀರನಾರಾಯಣಮನಸಿನ ಇಂಗಿತವನು ಪೇಳೆಲೊ ನೀ 3
***
No comments:
Post a Comment