ಕಾಖಂಡಕಿ ಶ್ರೀ ಕೃಷ್ಣದಾಸರು
ವದನದಲಿ ಮನವೇ ನೆನಿನಾಮ ಶ್ರಿಹರಿಯಾ | ಸದಮಲದಲಿ ಮರೆಯದೆ ಬಾವದಲಿ ಪ
ದಾವನು ದಾಸರ ದಾಸರ ಪದರಾ | ಜೀವ ಯುಗಳ ದರುಶನದಲಿ | ತೀವಿಕೊಂಡಿಹ ಬಹುಜನ್ಮದು ಷ್ಕøತ | ಲಾವಡಗುತಿಹವು ನಿಮಿಷದಲಿ 1
ನಾಮದ ಮಹಿಮೆಯ ತಿಳಿಯಲು ಅರಸಲು | ಅಮಹಾನಿಗಮಾಗಮದಲಿ | ವ್ಯೋಮ ಕೇಶನಾರದಾಹನುಮರೆ ಬಲ್ಲ | ನಾಮದ ಸುಖವೆಂತೋ ಭುವನದಲಿ2
ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ | ಅರ್ವವ ಹಿಡದು ತ್ರಿಕರ್ಣದಲಿ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ | ಮೆರ್ಪಪಾದುಕ ವಿಟ್ಟು ಹೃದಯದಲಿ 3
***
No comments:
Post a Comment