Wednesday, 1 September 2021

ಕಂಡಿರೇನಯ್ಯ ಹರಿಯನ್ನು ಚಂಡ ಪ್ರಚಂಡನ ಪುಂಡರೀಕಾಕ್ಷನ ankita gadugina veeranarayana

 ..

kruti by ವೀರನಾರಾಯಣ Veeranarayana 


ಕಂಡಿರೇನಯ್ಯ ಹರಿಯನ್ನು ಪ


ಚಂಡ ಪ್ರಚಂಡನ ಪುಂಡರೀಕಾಕ್ಷನ ಅ. 


ಅಲ್ಲಲ್ಲಿ ಇರುವನಂತೆ ಎಲ್ಲೆಲ್ಲೂ ಶಿಕ್ಕನಂತೆಗುಲ್ಲನು ಕೊಡದಿಹನಂತೆ ಬಲ್ಲವ ಬಲ್ಲನಂತೆ 1


ಧ್ರುವನ ಮುಂದೆ ನಿಂತಿದ್ದನಂತೆಕುವರ ಪ್ರಹ್ಲಾದನ ಹಿಡಿದಿದ್ದನಂತೆಬವರದಿ ಪ್ರಾರ್ಥಿಸೆ ತೋರಿದವನಂತೆಶಬರಿಯ ಎಂಜಲ ತಿಂತಿದ್ದನಂತೆ 2


ಮುನಿಗಳು ಹೃದಯದಿ ಕಂಡರಂತೆವನಿತೆ ಯಶೋದೆಗೆ ಸಿಕ್ಕಿದನಂತೆಹನುಮ ಭೀಮರು ನೋಡಿದರಂತೆಅನಿತೋದ್ಭವಗೆ ಮೆಚ್ಚಿದನಂತೆ 3


ದ್ರೌವ್ಯದ ಕಣ್ಣಿಗೆ ಕಾಣಿಸನಂತೆದಿವ್ಯ ದೃಷ್ಟಿಗೆ ಸಿಲುಕುವನಂತೆಭವ್ಯ ಗದುಗಿನ ವೀರನಾರಾಯಣದಿವ್ಯ ದೃಷ್ಟಿಯ ಕೊಡು ಓರಂತೆ 4

***


No comments:

Post a Comment