Thursday, 17 October 2019

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ ankita vijaya vittala

ವಿಜಯದಾಸ
ರಾಗ - : ತಾಳ -

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ l 
ಸಾರು ನೀನು ಎನಗೆ ಸುಮ್ಮನ್ಯಾತಕೆ ಇದ್ದೀ ll ಪ ll 

ನೀರೊಳು ಮುಣುಗಿ ವೇದವ ತಂದಾತನೋ l
ಭಾರವನ್ನು ಪೊತ್ತು ಸುರರ ಕಾಯಿದಾತನೊ l
ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ l
ಕ್ರೂರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ ll 1 ll

ಗಗನಕೆ ಬೆಳೆದು ಸುರ ನದಿಯ ಪಡೆದಾತನೊ l
ಹಗೆಗಳ ಕೊಂದು ಹರುಷಿತನಾದನೊ l
ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ l
ಮಗನ ಮಗನ ತಂದ ಮಹಿಮನೋ ll 2 ll 

ಹರಗೆ ಸಾಯಕವಾಗಿ ಪುರ ಉರುಹಿದಾತನೊ l 
ದುರುಳನ ಕೊಂದ ದುರ್ಲಭ ದೇವನೊ l 
ಕರಿರಾಜ ವರದ ಶ್ರೀ ವಿಜಯವಿಟ್ಠಲರೇಯ l 
ಶರಣರಿಗೊಲಿದು ಬಂದ ಸರ್ವೋತ್ತಮನೊ ll 3 ll
***

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ |
ಸಾರು ನೀನು ಎನಗೆ ಸುಮ್ಮನ್ಯಾತಕೆ ಯಿದ್ದೀ ಪ

ನೀರೊಳು ಮುಣಗೆ ವೇದವ ತಂದಾತನೊ |
ಭಾರವನು ಪೊತ್ತು ಸುರರ ಕಾಯಿದಾತನೊ |
ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ |
ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1

ಗಗನಕೆ ಬೆಳದು ಸುರ ನದಿಯ ಪಡೆದಾತನೊ |
ಹಗೆಗಳ ಕೊಂದು ಹರುಷಿತನಾದನೊ |
ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ |
ಮಗನಮಗನ ತಂದ ಮಹಿಮನೊ 2

ಹರಗೆ ಸಾಯಕವಾಗಿ ಪುರ ಉರಹಿದಾತನೊ |
ದುರುಳರನ ಕೊಂದ ದುರ್ಲಭದೇವನೊ |
ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ -
ಶರಣರಿಗೊಲಿದು ಬಂದ ಸರ್ವೋತ್ತಮನೊ 3
*********

No comments:

Post a Comment