Tuesday, 12 November 2019

ತೊರವೆಪುರನಿವಾಸ ನರಸಿಂಹ ನೀಹೊರೆಯೊ ankita prasannavenkata

by ಪ್ರಸನ್ನವೆಂಕಟದಾಸರು
ರಾಗ – : ತಾಳ –

ತೊರವೆಪುರನಿವಾಸ ನರಸಿಂಹ ನೀ 
ಹೊರೆಯೊ ಭಕ್ತರ ಭಯಗಜಸಿಂಹ 
ಅರಿವರಾರಯ್ಯ ನಿನ್ನ ಮಹಿಮೆಯ 
ಸರಸಿಜಭವ ಭವ ಸುರವರ ಅಹಿ ಕಿನ್ನರ
ವರ ಮುನಿವರ ನರವರವಂದ್ಯ ll ಪ ll

ಹಿರಣ್ಯಕನೆಂಬ ದೈತ್ಯ ಮಹೀತಳದಿ ವಿಧಿ
ಹರವರದಲಿ ಬಲುಸೊಕ್ಕಿ ಅಂದು 
ಪರಮ ಭಾಗವತ ಪ್ರಹ್ಲಾದನಿಗೆ
ಪರಿಪರಿದುರಿತವ ಮರಳಿ ಮರಳಿ ಭಯಂ
ಕರವನು ಚರಿಸಲು ನೆರೆಮೊರೆಯಿಡಲು ll 1 ll

ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲು
ಸರವಭೂತ ಭರಿತಾನಂತನೀತ
ಅರಸಿದರೀ ಕಂಬದೊಳಿಹನೆನಲು 
ಮೊರೆ ಮೊರೆದೇಳುತ ಸರಸರನೊದೆಯಲು 
ಬೆರಬೆರ ದೋಷದಿ ವರನರಹರಿಯೆ ll 2 ll

ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರ
ಕಟಿಸಿ ದೈತ್ಯನುದುರವನು ಸೀಳಿ
ತ್ರುಟಿಯೊಳು ಕರುಳಮಾಲೆಯ ಧರಿಸಿ
ಶಠನ ವಧಿಸಿ ನಿಜಭಟನ ಪೊರೆದ ಜಗ
ಜಠರ ಪ್ರಸನ್ನವೆಂಕಟ ನರಸಿಂಹ ll 3 ll

***


ತೊರವೆಪುರನಿವಾಸ ನರಸಿಂಹ ನೀಹೊರೆಯೊ ಭಕ್ತರ ಭಯಗಜಸಿಂಹಅರಿವರಾರಯ್ಯ ನಿನ್ನ ಮಹಿಮೆಯಸರಸಿಜಭವಭವಸುರವರಅಹಿಕಿನ್ನರವರಮುನಿವರ ನರವರವಂದ್ಯಪ.

ಹಿರಣ್ಯಕನೆಂಬ ದೈತ್ಯ ಮಹೀತಳದಿವಿಧಿಹರವರದಲಿ ಬಲುಸೊಕ್ಕಿ ಅಂದುಪರಮಭಾಗವತಪ್ರಹ್ಲಾದನಿಗೆಪರಿಪರಿದುರಿತವ ಮರಳಿ ಮರಳಿ ಭಯಂಕರವನು ಚರಿಸಲು ನೆರೆಮೊರೆಯಿಡಲು 1

ತರಳಗಂಜಿಸಿ ನಿನ್ನ ದೊರೆಯ ತೋರೊ ಎನಲುಸರವಭೂತ ಭರಿತಾನಂತನೀಗಅರಸಿದರೀ ಕಂಬದೊಳಿಹನೆನಲುಮೊರೆ ಮೊರೆದೇಳುತ ಸರಸರನೊದೆಯಲುಬೆರಬೆರ ದೋಷದಿ ವರನರಹರಿಯೆ 2

ಚಿಟಿಲು ಚಿಟಿಲು ಭುಗಿಭುಗಿಲೆನುತ ಪ್ರಕಟಿಸಿ ದೈತ್ಯನುದರವನು ಸೀಳಿತ್ರುಟಿಯೊಳು ಕರುಳಮಾಲೆಯ ಧರಿಸಿಶಠನ ವಧಿಸಿ ನಿಜಭಟನ ಪೊರೆದ ಜಗಜಠರಪ್ರಸನ್ನವೆಂಕಟ ನರಸಿಂಹ3
********

No comments:

Post a Comment