Tuesday, 12 November 2019

ತೊಲತೊಲಗೆಲೊ ಕಲಿಯೆ ನಿಲ್ಲದಿಲ್ಲಿ ankita prasannavenkata

by ಪ್ರಸನ್ನವೆಂಕಟದಾಸರು
ತೊಲ ತೊಲಗೆಲೊ ಕಲಿಯೆ ನಿಲ್ಲದಿಲ್ಲಿ ಪ.

ತೊಲ ತೊಲಗೆಲೊ ಕಲಿಯೆ ಸಲೆಸಲುಗೆಯ ಬಿಡು ಸಲಿಲಜಾಕ್ಷನ ದಾಸರ ಅ.ಪ.ರಮೆರಮಣನ ಸಿರಿರಮಣೀಯ ನಾಮವಿರೆಯಮಗಿಮನಂಜಿಕೆ ಎಮಗುಂಟೆತಮ ತಮ ಮಹೋತ್ತಮ ಕುಲಗಳು ಮಹೋತ್ತ್ತಮತಮರೊಲುಮೆ ಮತ್ತವನ ಆಶ್ರಯವುಂಟು 1

ಮನ ಮನೋಸಂಭವನ ಮನೆ ಹೊಕ್ಕರೆ ಸೈರಿಸಘನಜ್ಞಾನಿ ಪೂರ್ಣಗುರು ಜ್ಞಾನಿರಾಯತನು ತನಯಾಂಗನೇರು ತನ್ನವಸರಕಾರಿಲ್ಲಈ ನಯನ ಹರಿನಾರಾಯಣನಲ್ಲಿ ತೊಡಗಿರೆ 2

ಬಿಡಬಿಡ ಭಟನೆಂದು ಬೇಡಿದಂತಾಭಯವೀವಪಡಿಪೊಡವಿಲಿ ಕೊಟ್ಟು ಪಿಡಿದ ಎನ್ನಒಡಒಡನೆ ರಕ್ಷಿಪ ಒಡೆಯ ಪ್ರಸನ್ವೆಂಕಟೇಶಅಡಿಯೆಡೆ ಸೇರಿದೆ ಬಾರೊ ಅಡಗಡಗೆಲೆಲೊ 3
********

No comments:

Post a Comment