ಬಳ್ಳಾರಿಯ ಓರಬಾಯಿ ಲಕ್ಷ್ಮೀದೇವಮ್ಮ ಅವರ ರಚನೆ
ಶ್ರೀ ರುದ್ರದೇವರ ಸ್ತೋತ್ರ
ರಾಗ - : ತಾಳ -
ನೋಡಿದೆನು ಶ್ರೀ ಶೈಲವಾಸನ l ನೋಡಿದೆನು ಪಾರ್ವತಿರಮಣನಾ
ನೋಡಿದೆನು l ನೋಡಿದೆನು l ಪರ್ವತ ಮಲ್ಲೇಶನಾ ll ೧ ll
ಆಟವಾಡುತ ಪಾಟ ಪಾಡುತ l ಕೋಟಿ ಜನರ ಸಹಿತಾಗಿ
ಸಾಟಿಯಿಲ್ಲದ ಪರ್ವತ l ನಾಗಾ ಲೋಟಿಯನೆ ನಾ ನೋಡಿದೆ ll ೨ ll
ಶುದ್ಧ ಸ್ನಾನವ ಮಾಡಿ ನಾನು l ವಿಧ್ಯುಕ್ತದಿಂದಲಿ l ಅಲ್ಲಿದ್ದ ಜನರ ಸಹಿತಾಗಿ
ಪೆದ್ದ ಚೆರುವನ್ನೆದಾಟಿದೆ l ಪುಟ್ಟ ಬೆಟ್ಟಗಳೇರಿ ಇಳಿಯುತ ಕೃಷ್ಣಧ್ಯಾನವ ಮಾಡುತ
ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ಮರಣೆಯ ಮಾಡುತ ll ೩ lld
ನಿಸ್ಸೀಮಗುಣಗಣಧಾಮ l ಅರಿಯದಮನ l ಸಾರ್ವಭೌಮ
ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ ll ೪ ll
ಆ ಶೈಲ ಕೈಲಾಸ ಧಾಮಕೆ l ಸೋಂಪಿನಿಂದಲಿ ಬಂದೆನೂ
ಸಾಕ್ಷಿಗಣಪಗೆ ಕೈಯ ಮುಗಿದೂ l ಶ್ರೀಶೈಲಶಿಖರವ ಕಂಡೆನು ll ೫ ll
ಭಂಗಾರ ಗೋಪುರದ ಮ್ಯಾಲೆ l ಶೃಂಗಾರವನು ನಾ ನೋಡಿದೆ
ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ ll ೬ ll
ಅಲ್ಲಿ ಸ್ನಾನವ ಮಾಡಿನಾನು l ಬಲ್ಲಿದನ ಬಲದಿಂದಲಿ
ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ ll ೭ ll
ಪಂಚಾಮೃತವ ಮಾಡಿನಾನು l ಸಂಚಿತಾಗಮ ಕರ್ಮವು
ವಂಚನಿಲ್ಲದೆ ಕರೆದು l ನಿಶ್ಚಿಂತೆ ಮನವನು ಮಾಡಿದೆ ll ೮ ll
ರಂಗ ಸಂಗದಿ ಜನಿತ ಪಾತಾಳಗಂಗಿ ಉದಕವು ತಂದು
ಗಂಗಾಧರಗೆ ಎರೆದು ನಾನು l ಕಂಗಳಿಂದಲಿ ನೋಡಿದೆ ll ೯ lls
ಧೂಪ ದೀಪ ನೈವೇದ್ಯದಾರುತಿ l ಅನೇಕ ಭಕ್ತಿಲಿ ಮಾಡಿದೆ
ಪ್ರೀತಿಯ ತೋರೆಂದು ಶಿವಗೆ l ಪ್ರೀತಿಲಿ ಕರಮುಗಿದೆನು ll ೧೦ ll
ಮುದ್ದು ಕೋಟಿಲಿಂಗಗೆ ನಾನು l ವಿಧ್ಯುಕ್ತದಿ ನಮಿಸಿದೆ
ವೃದ್ಧ ಮಲ್ಲೇಶ್ವರನ ನೋಡಿ l ಅಲ್ಲಿದ್ದದೇವರ ಭಜಿಸಿದೆ ll ೧೧ ll
ಅಮರರಿಂದರ್ಚಿಸಿಗೊಂಬ l ಭ್ರಮರಾಂಬನ ನೋಡಿದೆ
ಭ್ರಮೆಯು ಬ್ಯಾಡೆಂದು ಸಂಸಾರದ l ಬ್ಯಾಗದಿಂದಲಿ ಬೇಡಿದೆ ll ೧೨ ll
ಥಟ್ಟನೇ ಪಂಚಾ ಮಠವನೋಡಿ l ಆಟಕೇಶ್ವರಕೆ ಬಂದೆನು
ಶಿಖರೇಶ್ವರನ ದರ್ಶನ ಮಾಡಿ l ಹಾಟಕೇಶ ಪುರ ನೋಡಿದೆ ll ೧೩ ll
ಭಾರತೀಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ
ನಾರಸಿಂಹವಿಟ್ಠಲಗರ್ಪಿಸಿ l ಧಾರೆ ಎರೆದು ಬಂದೆನು ll ೧೪ ll
***
ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ನೋಡಿದೆನು ಶ್ರೀ ಶೈಲವಾಸನ | ನೋಡಿದೆನು
ಪಾರ್ವತಿರಮಣನಾ
ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1
ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ
ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2
ಶುದ್ಧ ಸ್ನಾನವ ಮಾಡಿನಾನು | ವಿಧ್ಯುಕ್ತದಿಂದಲಿ |
ಅಲ್ಲಿದ್ದ ಜನರ ಸಹಿತಾಗಿ
ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ
ಕೃಷ್ಣಧ್ಯಾನವ ಮಾಡುತ
ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3
ನಿಸ್ಸೀಮಗುಣಗಣಧಾಮ | ಅರಿಯದಮನ | ಸಾರ್ವಭೌಮ
ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4
ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ
ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5
ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ
ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6
ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ
ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7
ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು
ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8
ರಂಗ ಸಂಗದಿ ಜನಿತ ಪಾತಾಳಗಂಗಿ ಉದಕವು ತಂದು
ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9
ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ
ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10
ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ
ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11
ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ
ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12
ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು
ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13
ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ
ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14
***
No comments:
Post a Comment