ರಾಗ ನಾದನಾಮಕ್ರಿಯ ತಾಳ : ಆದಿ
ಶ್ರೀ ಗುರು ಪದ್ಮನಾಭ
ಯೋಗಿವರ್ಯನೆ ನಮಿಪೆ ।
ಭಾಗವತರ ಸಂಗಾ
ಇತ್ತೆನ್ನ ರಕ್ಷಿಸಯ್ಯ ।। ಪಲ್ಲವಿ ।।
ಭೋಗಾದಿಗಳ ದುಷ್ಟ
ರೋಗಾದಿ ಬಳಲೂತ ।
ನಾಗಶಯ್ಯಗೆ ನಿತ್ಯ
ಬಾಗದೆ ಕೆಟ್ಟೆನಯ್ಯ ।। ಅ ಪ ।।
ಮಧ್ವರಾಯರೊಡನೆ
ವಾದದಿ ನೀ ಸೋತು ।
ಸದ್ವೈಷ್ಣವ ಮತವ
ಪೊಂದಿ ಶಿಷ್ಯನಾಗುತಲೀ ।
ಉದ್ಧರಿಸಬೇಕೆನೆ
ಮುದ್ರಾಂಕಿತನ ಮಾಡಿ ।
ಪದ್ಧತಿಲಿ ಸರ್ವಜ್ಞರು
ಗದ್ದುಗೆ ಕೊಡೆಗೊಂಡಾ ।। ಚರಣ ।।
ಪರದೆಯೊಳಗೆ ಕುಳಿತು
ವರ ಸಾಸಿರ ವದನದಿ ।
ಗುರುಗೈದ ಭಾಷ್ಯಕೆ
ಪರಿಪರಿ ಅರ್ಥ ಪೇಳಿ ।
ಭರದಿ ಶಿಷ್ಯರಿಗೆಲ್ಲ
ತ್ವರ ಉಪದೇಶ ನೀಡಿ ।
ಧರಣೀಜೆ ಮೂಲರಾಮನ
ಹರುಷದಿ ಒಲಿಸಿದ ।। ಚರಣ ।।
ಸತ್ತರ್ಕದೀಪಾವಲೀ
ಸನ್ನ್ಯಾಯರತ್ನಾವಲೀ ।
ಉತ್ತಮ ಗ್ರಂಥ ರಚಿಸಿ
ಬತ್ತರಿಸುತಲಿ ।
ಸತ್ಯಭಾಮೆಯ ಪ್ರಿಯ
ಶ್ರೀ ಲಕುಮೀಶನ ।
ಚಿತ್ತದಿ ಧ್ಯಾನದಿ ತುಂಗೆ
ನಡುಗಡ್ಡಿ ಸೇರ್ದಾ ।। ಚರಣ ।।
*****
No comments:
Post a Comment