Saturday, 1 May 2021

ಪದ್ಮನಾಭರ ಭಜಿಸೋ ಹೇ ಮನುಜಾ ನೀ ankita karpara narahari padmanabha teertha stutih

ರಾಗ : ಶಂಕರಾಭರಣ  ತಾಳ : ಅಟ್ಟ 

ಪದ್ಮನಾಭರ ಭಜಿಸೋ 

ಹೇ ಮನುಜಾ ನೀ ।। ಪಲ್ಲವಿ ।।


ಮಧ್ವರಾಯರ ಕರಪದ್ಮ 

ಸಂಭವರಾದ ।। ಅ ಪ ।।


ಮತ್ತ ಮಾಯಿಗಳೆಂಬೊ ।

ಹಸ್ತಿ ಗಣಕೆ । ಪಂಚ ।

ವಕ್ತ್ರರೆಂದೆನಿಸಿದ ।

ಪೃಥ್ವೀ ಸುರ 

ಸೇವಿತ ।। ಚರಣ ।।


ಪ್ರೀತಿಯಿಂದಲಿ । ಗೋಪೀ ।

ನಾಥನರ್ಚಿಸಿ । ಸುಖ ।

ತೀರ್ಥ ಗ್ರಂಥಕೆ । ಸುವ್ಯಾ ।

ಖ್ಯಾತ್ರರೆಂದೆನಿಸಿದ ।। ಚರಣ ।।


ಧರೆಯೊಳು ಶರಣರ ।

ಪೊರೆವ ಕಾರ್ಪರ । ನರ ।

ಹರಿಯನೊಲಿಸಿದಂಥ ।ಪರಮ 

ಮಹಿಮರಾದ ।। ಚರಣ ।।

**** 

No comments:

Post a Comment