Thursday, 18 March 2021

ಹರಿ ಕೈಪಿಡಿಯೋ ಕೃಪಾವಿರಿಸೋ ದಾಸನಲಿ ankita narasimha1

 ರಾಗ - : ತಾಳ -


ಹರಿ ಕೈಪಿಡಿಯೋ ಕೃಪಾವಿರಿಸೋ ದಾಸನಲಿ ll ಪ ll


ಸ್ಮರಿಸುವೆನನುದಿನ ಪರತರ ಪರಶಕ್ತಿ

ಸುರವರನೀನಲ್ಲವಿರುವರೆ ಪೊರೆವರು ll ೧ ll


ಶಿರಿಧರೆ ಸುರನರ ನೆರೆ ಓಲೈಸುತ 

ಪರಮಪುರುಷ ನಿನ್ನ ಸ್ಮರಿಪರು ನಿರುತದಿ ll ೨ ll


ಹನುಮ ಭೀಮ ಮಧ್ವ ಮನಮುಟ್ಟಿ ಭಜಿಸುತ 

ಘನನೀಲ ದೇವನೆ ನೆನೆವರ ಮನದಲಿ ll ೩ ll


ಹರಿ ನಿನ್ನ ಧ್ಯಾನವು ಹರಿವುದು ದುರಿತವ 

ನರಸಿಂಹ ದೊರೆ ನಿನ್ನ ಮರೆವೆನೆ ll ೪ ll

**


No comments:

Post a Comment