Thursday, 18 March 2021

ಹಿಂದೂ ದಾಸ ಇಂದೂ ದಾಸ ಮುಂದೆ ankita narasimha vittala

 ರಾಗ - : ತಾಳ -


ಹಿಂದೂ ದಾಸ ಇಂದೂ ದಾಸ ಮುಂದೆ ಎಂದೆಂದಿಗೂ ಅರ 

ವಿಂದನಾಭ ವಿಟ್ಠಲನೆ ಗತಿಯೊ ನೀ ಅವನ ದಾಸ ll ಪ ll


ಬಂಧನದಿ ಬಳಲಿದಿ ಬಂದ ದುಃಖವ ನಾಶಿಸಿ 

ಹೊಂದಿದಿ ಶ್ರೀ ಹರಿಪಾದ ದಾಸ್ಯವಾ ಮಂದಿರವನ್ನಗಲಿದಿ 

ಮೂತಿ ಯಾಕೋ ಭವದ ಭೀತಿ ll ೧ ll


ಹುಟ್ಟಿದಿ ಹರಿಮತದಿ ಇಟ್ಟ ಹರಿಚಿನ್ಹೆಫಾಲದಿ 

ಮುಟ್ಟಿ ಭಜಿಸೆಲೊ ದಿಟ್ಟ ಕೃಷ್ಣನ್ನ 

ಇಟ್ಟಿ ಕಲ್ಲಮೇಲೆ ಪಾದವಿಟ್ಟ ವಿಟ್ಠಲನು ಪೊರೆವಾ ll ೨ ll


ಶಿರಿವರ ನರಸಿಂಹವಿಟ್ಠಲ ಕರುಣದಿ ಪೇಳಿದಾ ನಿನಗೆ

ಮರೆಯದೆ ಸೇವಿಸೊ ಹರಿಮೂರ್ತಿಯಾ

ಶರಣವತ್ಸಲ ಮೂರ್ತಿ ನಿರುತ ಸೇವೆಯ ಕೈಕೊಳ್ಳುವಾ ll ೩ ll

***


No comments:

Post a Comment