Saturday, 4 December 2021

ನೀ ದಯ ಮಾಳ್ಪನು ನಿರ್ದಯನಾದರೆ ಯಾರಿಗೆ ankita venkata vittala NEE DAYA MAALPANU NIRDAYANAADARE YAARIGE



ನೀ ದಯ ಮಾಳ್ಪನು ನಿರ್ದಯನಾದರೆ ಯಾರಿಗೆ ಮೊರೆಯಿಡಲಿ ||ಪ||


ಧೀರನು ನೀನು ಉದಾರನು ನೀನು 

ತಾರಕ ಪರಬ್ರಹ್ಮ ||

ಬಾರಿ ಬಾರಿಗೂ ನಿನ್ನ ಕೋರಿ ಭಜಿಸುವೆನು |

ಪಾರುಗಾಣಿಸೋ ಅಪಾರ ಮಹಿಮ ದೊರೆ ||೧||


ಎನ್ನನುದ್ಧರಿಸುವ ಘನ್ನ ಮಹಿಮನು ಪ್ರ-

ಸನ್ನ ವದನ ನೀನೇ |

ನಿನ್ನ ಚಿತ್ತದಲಿನ್ನು ತೋರದಿದ್ದರೆ ಸರಿ |

ಎನ್ನ ದೌರ್ಭಾಗ್ಯವಿದು ಪನ್ನಂಗ ಶಯನನೇ ||೨||


ಪಂಕಜನಯನ ಮೀನಾಂಕ ಜನಕ 

ಓಂಕಾರ ಮೂರ್ತಿ ನೀನೇ | 

ಕಿಂಕರರಿಗೆ ಬಂದ ಸಂಕಟ ಕಳೆಯೈ |

ಶಂಕರ ವಿನುತ ಶ್ರೀ ವೇಂಕಟ ವಿಠಲ ||೩||

***


nI daya mALpanu nirdayanAdare yArige moreyiDali ||pa||

 

dhIranu nInu udAranu nInu 

tAraka parabrahma ||

bAri bArigU ninna kOri Bajisuvenu |

pArugANisO apAra mahima dore ||1||

 

ennanuddharisuva Ganna mahimanu pra-

sanna vadana nInE |

ninna cittadalinnu tOradiddare sari |

enna daurBAgyavidu pannaMga SayananE ||2||

 

paMkajanayana mInAMka janaka 

OMkAra mUrti nInE | 

kiMkararige baMda saMkaTa kaLeyai |

SaMkara vinuta SrI vEMkaTa viThala ||3||

***


No comments:

Post a Comment