Saturday, 1 May 2021

ಮೂಲಪ್ರಕೃತಿ ರಮಣ ರಾಘವೇಂದ್ರ ಪ್ರಿಯ ಮೂಲರಾಮಾ ankita venkatanatha

 " ಶ್ರೀಮನ್ಮೂಲರಘುಪತಿ ಸ್ತೋತ್ರ - ( ಬಾಲ ಭಾಷೆಯಲ್ಲಿ ) ".... 

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೇಂಕಟನಾಥ 


ಮೂಲಪ್ರಕೃತಿ ರಮಣ 

ರಾಘವೇಂದ್ರ ಪ್ರಿಯ ಮೂಲರಾಮಾ ।


ಮೂಲೇಶನ ಸುಬು-

ಧೇಂದ್ರ ಪೂಜಿತ ಮೂರ್ಲೋಕ ಧೊರೆಯೇ ।। ಪಲ್ಲವಿ ।।

 

ಆದಿ ಮೂಲ ಆದಿ ವೈದ್ಯ 

ಆದಿ ದೈವ ನಾರಾಯಣ ।

ಆದಿ ನಾರಾಯಣ 

ಪಾಲಿಸಯ್ಯಾ ।। ಚರಣ ।। 


ಆನಂದ ಮುನಿ 

ವರದ ನಾರಸಿಂಹಾ  ।

ಆನಂದ ಹೃದಯ ವಿಹಾರಿ 

ದಿಗ್ವಿಜಯರಾಮಾ ।। ಚರಣ ।। 


ಸೋಮ ಸನ್ನಿಭ ಸಖನೇ ।

ಸೋಮಸೂರ್ಯನಯನಾ ।

ಸೋಮ ಸೋದರಿ ವಲ್ಲಭ ।

ಸೋಮಹಾಸನೆ 

ಜಯರಾಮಾ ।। ಚರಣ ।। 


ಹಂಸಪರಮ ಜ್ಞಾನವ 

ಕೊಡೋ ಕೃಷ್ಣಯ್ಯಾ ।

ಹಂಸರೊಂದಿತ 

ಹಂಸಲೋಚನ  

ವಾಸುದೇವಾ  ।। ಚರಣ ।। 

ಹಂಸವಾಹನ ಪಿತನೆ 

ಹಂಸಮೂರುತಿ ವೇದವ್ಯಾಸ ।

ಹಂಸ ಸಂಕುಲ ಪ್ರಿಯನೇ 

ವೇಂಕಟನಾಥ  ।। ಚರಣ ।। 

*****


ವಿವರಣೆ : 

" ಮೂಲ ಪ್ರಕೃತಿ ರಮಣ "

ಸೂಕ್ಷ್ಮ ರೂಪದ ಶ್ರೀ ಮಹಾಲಕ್ಷ್ಮೀದೇವಿಯರು 

ಮೂಲೇಶ = ಹೃದಯ ಕಮಲ ನಾಳಸ್ಥ ಶ್ರೀಮನ್ನಾರಾಯಣ 

ಆದಿ ಮೂಲ = ಅನಾದಿ 

ಆದಿ ವೈದ್ಯ = ಶ್ರೀ ಧನ್ವಂತರೀ 

" ಸೋಮ ಸನ್ನಿಭ ಸಖನೇ "

ಶಿವನನ್ನು ಶಿರದಲ್ಲಿ ಧರಿಸಿದ ಶ್ರೀ ಮಹಾರುದ್ರದೇವರ ಸಖನು 

" ಸೋಮ ಸೂರ್ಯ ನಯನ "

ಚಂದ್ರ ಸೂರ್ಯರನ್ನು ಕಣ್ಣುಗಳನ್ನಾಗಿವುಳ್ಳ ಶ್ರೀ ಹರಿ 

" ಸೋಮ ಸೋದರಿ "

ಚಂದ್ರ ಸಹೋದರಿ ಶ್ರೀ ಮಹಾಲಕ್ಷ್ಮೀದೇವಿಯರು 

ಹಂಸಪರಮ = ಜೀವಾತ್ಮ, ಪರಮಾತ್ಮ 

" ಹಂಸರೊಂದಿತ "

ಜ್ಞಾನಿಗಳಿಂದ ವಂದಿತನಾದ ಶ್ರೀಮನ್ನಾರಾಯಣ 

" ಹಂಸಲೋಚನ "

ಸೂರ್ಯ ಚಂದ್ರರನ್ನು ಕಣ್ಣುಗಳಾಗಿ ಉಳ್ಳವನು - ಶ್ರೀ ಹರಿ 

ಹಂಸವಾಹನ = ಶ್ರೀ ಚತುರ್ಮುಖ ಬ್ರಹ್ಮದೇವರು 

ಹಂಸಮೂರುತಿ = ಬಿಂಬರೂಪಿ ಪರಮಾತ್ಮ 

ಹಂಸ ಸಂಕುಲ = ಯತಿಗಳ ಸಮೂಹ 

ಗುರು ವಿಜಯ ಪ್ರತಿಷ್ಠಾನ

*****


No comments:

Post a Comment