Friday, 27 December 2019

ಎಂದು ಕರುಣದಿಂದ ನೋಡುವಿ ರಾಘವೇಂದ್ರ ankita anantadreesha

on ರಾಘವೇಂದ್ರ ಗುರುಗಳು
ಎಂದು ಕರುಣದಿಂದ ನೋಡುವಿ ರಾಘ-
ವೇಂದ್ರಗುರುವೆ ಎಂದು ನಮಗಾನಂದನೀಡುವಿ ಪ

ಎಂದು ಕರುಣದಿಂದ ನೋಡುವಿ
ನೊಂದು ತಾಪದಿಂದ ಬಹಳ
ಬೆಂದು ನಿನ್ನ ಕಂದನೆಂತೆಂದು ಪಾದಕೆ
ಹೊಂದಿದವನ ಅ.ಪ

ದೀನನಾನು ಧೇನಿಸುವೆನೊ ಅನುದಿನ ಕಾಮ
ಧೇನು ನೀನು ದಾನಶೂರನೊ
ದಾನದಲ್ಲಿ ನೀದಾನ ಕಾರಣ ದಾನಿ ನಿನ್ನಂದ
ಹೀನನಾದಾ ದಾನದಿಂದ ಇನ್ನೇನು ಫಲವು
ದಾನಮಾಡೊ ದೀನರೊಡಿಯ 1

ಅಲ್ಪ ನಾನು ಜಲ್ಪಕೆಣಿಸುವೆ ಅ-
ನಲ್ಪ ನೀನು ಕಲ್ಪವೃಕ್ಷಕಲ್ಪನಲ್ಲವೆ
ಅಲ್ಪರಿಗೆ ಅನಲ್ಪ ಫಲ ಅಕಲ್ಪಿತವಾಗಿ ಕಲ್ಪಿಸುವರೆ
ಅಲ್ಪರಿವÀರನಲ್ಪರೆಂದು
ಸ್ವಲ್ಪಮನೋ ವಿಕಲ್ಪವಿಲ್ಲದೆ 2

ಗುಣಿಯು ನೀಣು ಅಣಿಯು ಇಲ್ಲದ ದು
ರ್ಗುಣಿಯು ನಾನು ಹಣಿಯೋ ನೀನು
ಮಣಿಯೊ ಪಾಪದ
ಧಣಿಯು ಚಿನ್ನದ ಖಣಿಯೇ ಚಿಂತಾ

ಮಣಿಯೆ ನಿನಗೆ ಎಣಿಯು ಇಲ್ಲಗುಣಿ `ಅನಂತ' ಫಣಿಯ ತೋರಿಸು ದಣಿಯಲಾರೆ 3
*********

No comments:

Post a Comment