Thursday, 5 December 2019

ನೀನಲ್ಲದೆ ನನಗಾರಿಲ್ಲ ಗೋವಿಂದ purandara vittala

ಪುರಂದರದಾಸರು
ನೀನಲ್ಲದೆ ನಗಾರಿಲ್ಲ ಗೋವಿಂದ ನೀನಲ್ಲದೆ ಇಹಪರವಿಲ್ಲ ಪ

ಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1

ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2

ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
********

No comments:

Post a Comment