..
ದಾಸರಾಯ ವಿಜಯದಾಸರಾಯ |
ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ
ಸಕಲಜಗತ್ತಿಗೆ ಲಕುಮೀಶಪರೆನೆಂದು
ಮಖವಾಚರಿಪ ಮುನಿ ನಿಕರಕೆÉ ಸಾರಿದ 1
ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ |
ಮಾನಸ ಕುಮುದಕೆÉ ಏಣಾಂಕನೆನಿಸಿದ 2
ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ
ವಿಧ ವಿಧ ರಚಿಸಿದ ಸದಮಲ ಸುಚರಿತ್ರ 3
ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ |
ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ 4
ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ
ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ 5
ತಪ್ಪದೆ ಭಕ್ತಿಲಿ ಬರುವ ಭಕ್ತರಿಗೆಲ್ಲ
ತಪ್ಪು ಮನ್ನಿಸಿ ಭಜಿಪಭಕ್ತರಿಗೊಲಿದು
ಪೊರೆವ ಚಿಪ್ಪಶಿಖರನಿಲಯ 6
ಪಾಮರನಾದೆನಗೆ ಶಾಮಸುಂಧದರ ಸ್ವಾಮಿ
ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ 7
***
No comments:
Post a Comment