Friday, 3 December 2021

ಈಸಬೇಕು ಇದ್ದು ಜೈಸಬೇಕು purandara vittala EESABEKU IDDU JAISABEKU



RESTART MOBILE IF AUDIO IS NOT PLAYING  

or just scroll down for other devaranama/ CLICK-> HOME


ಈಸಬೇಕು-ಇದ್ದು ಜೈಸಬೇಕು| 
ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| 

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು 
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| 

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| 
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ಭಕುತರೆಲ್ಲ ||೨|| 

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂತೆ | 
ಮೋಸ ಹೋಗದ್ಹಾಂಗೆ ಜಗದೀಶ ಪುರಂದರವಿಠಲನೆನುತ ||೩||
***

Pallavi
Īsabēku-iddu jaisabēku
Hēsige saṃsāradalli āśā lēśa māḍadhāṅge

Charana 1
Tāmarasa jaladante prēmaviṭṭu bhavadoḷu
Svāmi Rāmanenuta pāḍi kāmita kaigoṃbarella

Charana 2
Gēruhaṇṇinali bīja sēridante saṃsāradi
Mīri āse māḍadhāṅge dhīra Kṛṣṇana bhakutarella

Charana 3
Māṃsadāsege matsya siluki hiṃsepaṭṭa pariyante
Mōsa hōgadhāṅge Jagadīśa Purandaraviṭhalanenta
***

Pronunciation Guide
Vowels: "a" (cup), "ā" (father), "i" (pin), "ī" (see), "u" (put), "ū" (boot), "e" (bed), "o" (go).

Consonants: 'ṭ/ḍ' are retroflex (tongue to roof of mouth); 'ṅ' is nasal "ng" as in "song".

Soft Sounds: 'ś' is a soft "sh" sound; 'j' is as in "joy"; 'g' is always hard as in "go".

Aspiration: Ensure clear 'bh', 'dh', 'gh', and 'ph' sounds for the correct phonetic weight.

Rhythm: Recite with a devotional, lingering, and steady pace to capture the divine essence.
***

Summary (Kannada)
ಪುರಂದರದಾಸರ ಈ ಸುಪ್ರಸಿದ್ಧ ಕೀರ್ತನೆಯಲ್ಲಿ, ಸಂಸಾರದಲ್ಲಿ ಇದ್ದುಕೊಂಡು ಕೂಡ ಅಂಟಿಕೊಳ್ಳದೆ ಹೇಗೆ ಬದುಕಬೇಕು ಎಂಬ ಜೀವನದ ಸಾರವನ್ನು ದಾಸರು ತಿಳಿಸಿದ್ದಾರೆ. ಕಮಲದ ಎಲೆ, ಗೇರು ಹಣ್ಣಿನ ಬೀಜ ಮುಂತಾದ ರೂಪಕಗಳನ್ನು ಬಳಸುತ್ತಾ, ಭಗವಂತನ ನಾಮಸ್ಮರಣೆಯೊಂದಿಗೆ ಮುಕ್ತಿಯ ಮಾರ್ಗವನ್ನು ತೋರಿಸಿದ್ದಾರೆ.

Padyada Artha (Kannada Meaning)
ಪಲ್ಲವಿ:

ಈಸಬೇಕು-ಇದ್ದು ಜೈಸಬೇಕು |
ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||
ಅರ್ಥ: ಈ ಸಂಸಾರದಲ್ಲಿ ಇರಬೇಕು, ಅದನ್ನು ಜಯಿಸಬೇಕು. ಆದರೆ, ಈ ಹೇಸಿಗೆಯಾದ (ಅಲ್ಪವಾದ) ಸಂಸಾರದ ವಿಷಯಗಳಲ್ಲಿ ಕಿಂಚಿತ್ತೂ ಆಸೆಯನ್ನು ಇಡಬಾರದು.

ಚರಣ 1:

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು |
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ || 1 ||
ಅರ್ಥ: ನೀರಿನಲ್ಲಿ ಬೆಳೆದರೂ ನೀರು ತಗುಲದ ತಾವರೆಯ ಎಲೆಯಂತೆ, ಸಂಸಾರದಲ್ಲಿದ್ದರೂ ಅಂಟದೆ ಇರಬೇಕು. ಸ್ವಾಮಿ ರಾಮನೆಂದು ಭಗವಂತನ ನಾಮವನ್ನು ಹಾಡುತ್ತಾ, ಭಕ್ತರೆಲ್ಲರೂ ತಮ್ಮ ಇಷ್ಟಾರ್ಥಗಳನ್ನು (ಕಾಮಿತ) ಪಡೆಯುತ್ತಾರೆ.

ಚರಣ 2:

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ |
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ಭಕುತರೆಲ್ಲ || 2 ||
ಅರ್ಥ: ಗೇರುಹಣ್ಣಿನ ಹೊರಗೆ ಬೀಜ ಇರುತ್ತದೆ, ಆದರೆ ಅದು ಹಣ್ಣಿನ ಒಳಗೆ ಸೇರಿಕೊಂಡಿಲ್ಲ. ಹಾಗೆಯೇ ಸಂಸಾರದಲ್ಲಿ ಇದ್ದರೂ, ಅದರ ವಿಷಯಗಳಿಗೆ ಅತಿಯಾದ ಆಸೆ ಪಡದೆ, ಧೀರನಾದ ಕೃಷ್ಣನ ಭಕ್ತರು ಇರುತ್ತಾರೆ.

ಚರಣ 3:

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂತೆ |
ಮೋಸ ಹೋಗದ್ಹಾಂಗೆ ಜಗದೀಶ ಪುರಂದರವಿಠಲನೆನುತ || 3 ||
ಅರ್ಥ: ಬಲೆಯಲ್ಲಿರುವ ಮಾಂಸಕ್ಕೆ ಆಸೆಪಟ್ಟು ಮೀನು ಸಿಕ್ಕಿಹಾಕಿಕೊಂಡು ಹೇಗೆ ಹಿಂಸೆ ಅನುಭವಿಸುತ್ತದೆಯೋ, ಹಾಗೆ ವಿಷಯ ಸುಖಕ್ಕೆ ಮೋಸ ಹೋಗಬಾರದು. ಜಗದೀಶನಾದ ಪುರಂದರವಿಠಲನನ್ನು ಸ್ಮರಿಸುತ್ತಾ ಸಂಸಾರವನ್ನು ಜಯಿಸಬೇಕು.
***

Summary (English)
In this famous composition, Purandaradasaru explains the essence of how one should live in the world without becoming attached to it. Using metaphors like the lotus leaf in water and the seed of a cashew fruit, he illustrates how a devotee should live in the worldly life (samsara) without harboring desires for it. He emphasizes that by constantly chanting the name of the Lord, one can transcend worldly temptations and attain liberation.

Meaning (English)
Pallavi:

Īsabēku-iddu jaisabēku | Hēsige saṃsāradalli āśā lēśa māḍadhāṅge ||
Meaning: One should live in this world and conquer it, but without harboring the slightest desire for the filth of worldly attachments.

Charana 1:

Tāmarasa jaladante prēmaviṭṭu bhavadoḷu | Svāmi Rāmanenuta pāḍi kāmita kaigoṃbarella || 1 ||
Meaning: Just as a lotus leaf exists in water without getting wet, one should live in this world with devotion. By singing the praises of Lord Rama, the devotees attain their desired goals.

Charana 2:

Gēruhaṇṇinali bīja sēridante saṃsāradi | Mīri āse māḍadhāṅge dhīra Kṛṣṇana bhakutarella || 2 ||
Meaning: Just as the seed of a cashew fruit is attached to the outside of the fruit (distinct from it), wise devotees of the brave Lord Krishna live in this world without being consumed by extreme desires.

Charana 3:

Māṃsadāsege matsya siluki hiṃsep aṭṭa pariyante | Mōsa hōgadhāṅge Jagadīśa Purandaraviṭhalanenta || 3 ||
Meaning: Just as a fish gets caught in a hook due to its greed for meat and suffers, one should not be deceived by worldly temptations. Instead, one should live by chanting the name of the Lord of the Universe, Purandara Vithala.
***


ರಾಗ : ಧನ್ಯಾಸಿ  ತಾಳ : ಆದಿ (raga tala may differ in audio)

Isabeku iddu jayisabeku
Hesige samsaradalli Ase lesa idad~ha0ge ||pa||

Tamarasa jaladamte
Premavittu bavadolu
Svami ramanenuta padi
Kamita kaigombarella ||1||

Geru hanninalli bija
Serida0te samsaradi
Miri Ase madadamte
Dhira krushnana Bakutarella ||2||

Mamsadasege matsya siluki
Himsepatta pariyamte
Mosa hogad~ha0ge jaga-
Disa puramdaravithalana nenedu ||3||
***

pallavi

IsabEku idda jayisabEku

anupallavi

hEsige samsAradalli AsalEsha iDadhAge

caraNam 1

tAmarasa jaladante prEmaviTTu bhavadoLu svAmi rAma enuta pADi kAmita kai kombarella

caraNam 2

gEru haNNinalli bIja sEridante samsAradi mIriyAse mADadale dhIra krSNana bakutarella

caraNam 3

mAmsa dAsage matsya siluki himsepaTTa pariyante mOsa hOgadhAge jagadIsha purandara viTTalana nenedu
***


ಈಸಬೇಕು ಇದ್ದು ಜಯಿಸಬೇಕು ||ಪ||
ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ ||ಅ.ಪ.||

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿಯಾಸೆ ಮಾಡದಲೆ ಧೀರಕೃಷ್ಣನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು
*****


ಈಸಬೇಕು ಇದ್ದು ಜಯಿಸಬೇಕು

ಪುರಂದರ ದಾಸರದು ಬರೆದು ಕಟ್ಟಿಡುವ ಸಾಹಿತ್ಯವಲ್ಲ. ದೇಶ ಕಾಲದ ಸಾಣಿಕಲ್ಲ ಮೇಲೆ ಅನುಭವದ ಕೊರಡು ತೇಯ್ದ ಗಂಧ. ಮಧುಕರ ವೃತ್ತಿಯಿಂದ 'ಮುತ್ತು ಬಂದಿದೆ ಕೊಳ್ಳಿರೋ' ಎಂದು ಹಾಡಿದರೆ ಮನೆ ಮನ ಎರಡೂ ತುಂಬಿದವು.

ಈಸಬೇಕು ಇದ್ದು ಜಯಿಸಬೇಕು ಎಂಬುದು ಅವರ ಪ್ರೇರಣಾದಾಯಿ ವಾಕ್ಯ.

ಜೀವನ ಮತ್ತು ಸಮಸ್ಯೆಗಳಿಗೂ ಗೇರು ಮತ್ತು ಬೀಜದ ಸಂಬಂಧ. ಕಷ್ಟಗಳೆಂಬ ಗೇರಿನಿಂದ ಹೊರಬಂದಾಗ ಗೋಡಂಬಿ. 
ಹೀಗೆ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬೇಕು. ಓಡಿ ಹೋಗಬಾರದು. ಹೊರಹೋಗುವ ವಿಚಾರಮಾಡದೆ ಕೊಳೆಸಿ ಮದ್ಯವಾಗಬಾರದು.

ಆತ್ಮಹತ್ಯೆಗೆ ಶರಣಾಗುವ ಎಷ್ಟೋ ಜನರು ಒಂದು ಬಾರಿ ಮುಂದಕ್ಕೆ ಹಾಕಿದರೆ ನೂರು ವರ್ಷ ಆಯಸ್ಸು. ಸಮಸ್ಯೆ ಅವಮಾನ ವ್ಯಾಧಿ ಮನುಷ್ಯರಿಗೆ ಆಗದೇ ಮರಕ್ಕಾ? ಸಣ್ಣ ವಿಷಯಕ್ಕೆ ದುಡಿಕಿ ಸರಿಪಡಿಸಲಾಗದ ಘಾಸಿ ಮಾಡಿ ಎದ್ದು ಹೋದವರಿದ್ದಾರೆ

ಅತಿ ಸಣ್ಣ ವಿಷಯಕ್ಕೆ ಮನಸ್ತಾಪಕ್ಕೆ ಡೈವೋರ್ಸ್ ಕೊಟ್ಟು ಕೊಳ್ಳುವ ನಿರ್ಧಾರ ಮಾಡಿದವರಿದ್ದಾರೆ.

ದಾಸರು ಪರಿ ಪರಿಯಿಂದ ಹೇಳಿದ್ದು ಈಸಬೇಕು ಇದ್ದು ಜಯಿಸಬೇಕು.

ಸಮಸ್ಯೆಗಳು ಎಲ್ಲಿಲ್ಲ?  ಕೆಲಸದಲ್ಲಿ, ಕುಟುಂಬದಲ್ಲಿ, ಜೀವನದಲ್ಲಿ ಸಮಾಜದಲ್ಲಿ, ಧರ್ಮದಲ್ಲಿ, ದೇಶದಲ್ಲಿ, ಪ್ರಪಂಚದಲ್ಲಿ ಎಲ್ಲಾಕಡೆ ಇವೆ. ಮನುಷ್ಯ ಮತ್ತು ಸಮಸ್ಯೆಗಳ ಸಂಬಂಧ ಮೀನು ನೀರಿನಂತೆ. ನೀರೊಳಗೆ ಇರಬೇಕು ಕೊಳೆ ತೊಳೆಯಬೇಕು.

ಮೀನುಗಾರ ತೋರಿಸಿದ ಗಾಳದ  ತುದಿಯ ಮಳೆಹುಳುವಿಗೆ ಮರುಳಾಗಬಾರದು, ಮತಾಂತರವಾಗಬಾರದು. ದೇಶ ಬಿಡುತ್ತೇನೆ ಎನಬಾರದು. ಸೋಡಚೀಟಿ ಕೊಡುವ ವಿಚಾರ ಮಾಡಬಾರದು. ಎಲ್ಲವುಗಳನ್ನು ಎದುರಿಸಿ ಈಸಿ ನಮ್ಮ ದಡ ತಲುಪಿ ಜಯಿಸಬೇಕು.

ಸಾಧಿಸಲು ಒಂದು ಸಣ್ಣ ಅವಕಾಶ ಇದ್ದಾಗಲೂ ನಿವೃತ್ತಿ ಮಾರ್ಗ ಸಲ್ಲ. ತುಂಬು ಬಾಳು ಇದ್ದು ಸಾಮ, ದಾನ, ದಂಡ, ಬೇಧ ಇವುಗಳಿಂದ ಗೆದ್ದು ಈಸಬೇಕು ಇದ್ದು ಜಯಿಸಬೇಕು ಎಂಬುದು ದಾಸರ ಸಂದೇಶ.
******

No comments:

Post a Comment