Monday, 6 September 2021

ಕಂಡೆ ಕಂಡೆ ಬೃಂದಾವನವನು ಕಂಡೆ ankita vasudevakrishna vittala

ankita ವಾಸುದೇವಕೃಷ್ಣವಿಠಲ 

ರಾಗ: ಮೋಹನ ತಾಳ: ಆದಿ


ಕಂಡೆ ಕಂಡೆ ಬೃಂದಾವನವನು ಕಂಡೆ


ಕಂಡೆ ಕಂಡೆ ಶ್ರೀರಾಘವೇಂದ್ರಯತಿಗಳ ಪ್ರ-

ಚಂಡ ಮಾರುತನ ಎದುರಿಗೆ ನಿಂತವರ ಅ. ಪ


ಕರದೊಳು ಜಪಮಣಿ ಧ್ಯಾನದೊಳಿರುವ

ಕೊರಳಲಿ ತುಳಸಿಯಮಾಲೆಯನು

ಕೋರಿದವರಿಗೆ ಕರೆದು ಅಭಯನೀವ

ಕರುಣಾಸಾಗರ ನಮ್ಮ ಗುರುರಾಜರ ನಾ 1

ಚಂದದಿ ಕಾವಿಯ ಧರಿಸಿ

ಚಂದ್ರಿಕೆ ಬರೆದ ಕುಂದಣಕಾಯದ ಮುನಿಯನು ಕಂಡೆ

ಕುಂದದೆ ರಾಜನ ಕುಹಯೋಗವ ಹರಿಸಿದ 

ಚಂದ್ರವದನ ನಮ್ಮ ವ್ಯಾಸರಾಜರ ನಾ 2

ಹುಸಿಯಮಾತಲ್ಲ ಈ ಕೂಸಿನ ಮಹಿಮೆಯು

ವಿಷವನು ಕುಡಿಸಿದ ಪಿತನ ಮಾತಿಗೆ 

ವಾಸುದೇವಕೃಷ್ಣವಿಠಲನ ತೋರಿದ

ಲೇಸಾಗಿ ಪ್ರತಿದಿನ ಉತ್ಸವದಲಿ ಮೆರೆಯುವ ಪ್ರಹ್ಲಾದರಾಜರ ನಾ 3

***


No comments:

Post a Comment