Saturday 14 December 2019

ಶರಣು ಭಾರತಿರಮಣ ಶಮಲ ankita jagannatha vittala

ಜಗನ್ನಾಥದಾಸರು
ಶರಣು ಭಾರತಿರಮಣ ಶಮಲವರ್ಜೀತ ಚರಣ
ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ

ಇಪ್ಪತ್ತೊಂದು ಸಾವಿರದಾರುನೂರು ಜಪ
ತಪ್ಪದೆಲೆ ಸಕಲ ಜೀವರೊಳು ಜಪಿಸಿ
ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ
ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ 1

ಪವಮಾನರಾಯಾ ನೀ ಸಲಹದಿರೆ ಪಾಲಿಸುವ
ದಿವಿಜರಿನ್ನುಂಟೇನೋ ಲೋಕದೊಳಗೆ
ಯವನರಿಂದಲಿ ಬಂದ ಭಯವ ಪರಿಹರಿಸಿ ನಿ
ನ್ನವರ ಸಂತೈಸು ಸರ್ವಕಾಲದಲೀ 2

ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ
ನ್ನಾಗಿ ಸಂತೈಪೆನೆಂದನು ದಿನದಲೀ
ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ
ಭಾಗವತ ತಿಲಕ ಪಾಲಕ ವೀತಶೋಕ 3

ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು
ಸೂನು ಸಂರಕ್ಷಿಸಿದ ಸುರಪತನಯಾ
ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ
ಕಮಲ ಸಂಭವನ ಪದಕೆ ಯೋಗ್ಯ 4

ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ
ರುಚಿಪುಟ್ಟುವಂತೆ ಮಾಡುನುಗಾಲದೀ
ಮುಚುಕುಂದ ವರದ ಜಗನ್ನಾಥವಿಠಲನ ಗುಣ
ರಚನೆಗೈವ ಸಮರ್ಥ ನೀನೇ ಸುಕೃತಾರ್ಥ 5
********

No comments:

Post a Comment