check how hayavadana ankita ?
ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳಗುರು ಮಧ್ವಮುನಿರಾಯ
ಏನೆಂಬೆ ನಿನ್ನ ಗುಣ ಮಹಾತ್ಮೆಗೆಗುರುಮಧ್ವಮುನಿರಾಯ ಪ.
ಮುಖ್ಯಪ್ರಾಣ ರೂಪನಾಗಿ ಮುನಿಯ ಚಾರಿತ್ರ್ಯ ತಾಳಿದಿಗುರುಮಧ್ವಮುನಿರಾಯಸೊಕ್ಕಿದ ದೈತ್ಯರ ಸೊಕ್ಕುಮುರಿದು ಶೋಭಿಸಿದಿಗುರುಮಧ್ವಮುನಿರಾಯ 1
ವಾನರೇಂದ್ರ ರೂಪನಾಗಿ ವಾರಿಧಿಯ ದಾಟಿದಿಗುರುಮಧ್ವಮುನಿರಾಯಜಾನಕಿಗುಂಗುರಕೊಟ್ಟು ಜಗಜಟ್ಟಿಗಳ ಕುಟ್ಟಿದಿಗುರುಮಧ್ವಮುನಿರಾಯ 2
ಕ್ಷಿತಿಯೊಳು ಕುಂತೀಸುತ ಭೀಮನೆಂದೆನಿಸಿದಿಗುರುಮಧ್ವಮುನಿರಾಯಅತಿಹಿತದಿಂದ ಯದುಪತಿಯ ಭಜಿಸಿದಿಗುರುಮಧ್ವಮುನಿರಾಯ3
ಚಿಕ್ಕತನದಲ್ಲಿ ಶ್ರೀಕೃಷ್ಣನ ಪೂಜಿಸಿದಿಗುರುಮಧ್ವಮುನಿರಾಯಏಕವಿಂಶತಿ ಕುಭಾಷ್ಯವ ಜರಿದೆಯೊಗುರುಮಧ್ವಮುನಿರಾಯ4
ಅತಿ ಬಲವಂತ ಶ್ರೀಹಯವದನನ್ನ ಭಜಿಸಿದ್ಯೊಗುರುಮಧ್ವಮುನಿರಾಯಸತತ ಭಕ್ತರಿಗೆ ಕರುಣಾಮೃತ ಕರೆದೆಗುರುಮಧ್ವಮುನಿರಾಯ 5
***
ಆನಂದತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರುಮಧ್ವ ಮುನಿರಾಯಾ ।
ಏನೆಂಬೆ ನಾ ನಿನ್ನ ಕರುಣಕ್ಕೆ ಎಣೆಗಾಣೆ ಗುರುಮಧ್ವ ಮುನಿರಾಯಾ ॥ pa ||
ಬೇಸರದೆ ಸರ್ವರೊಳು ಶ್ವಾಸ ಜಪಗಳ ಮಾಡಿ ಗುರುಮಧ್ವ ಮುನಿರಾಯಾ |
ಶ್ರೀಶಗರ್ಪಿಸುತ ನಿನ್ನ ದಾಸರನ್ನು ಸಲಹಿದೆ ಗುರುಮಧ್ವ ಮುನಿರಾಯಾ ।| 1 ||
ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರುಮಧ್ವ ಮುನಿರಾಯಾ |
ಅಂದವಾದ ಪದವಿತ್ತಾನಂದದಿಂದ ಸಲಹಿದೆ ಗುರುಮಧ್ವ ಮುನಿರಾಯಾ ॥ 2 ||
ಕುಂತಿಯ ಕುಮಾರನಾಗಿ ಹಂತ ಕೌರವರ ಕೊಂದೆ ಗುರುಮಧ್ವ ಮುನಿರಾಯಾ ।
ಅನಂತ ಪುಣ್ಯಗಳಿಸಿ ಶ್ರೀಕಾಂತನಿಗೆ ಅರ್ಪಿಸಿದೆ ಗುರುಮಧ್ವ ಮುನಿರಾಯಾ ॥ 3 ||
ಅದ್ವೈತರನು ಕಾದಿ ಗೆದ್ದು ನಿನ್ನ ಭಕ್ತರಿಗೆ ಗುರುಮಧ್ವ ಮುನಿರಾಯಾ ।
ಶುದ್ಧ ತಾತ್ಪರ್ಯವಾಕ್ಯ ಪದ್ಧತಿಯ ತೋರಿಸಿದಿ ಗುರುಮಧ್ವ ಮುನಿರಾಯಾ ॥ 4 ||
ಗುರುಪ್ರಾಣೇಶ ವಿಠ್ಠಲ ಪರನೆಂದು ಡಂಗುರುವ ಗುರುಮಧ್ವ ಮುನಿರಾಯಾ ।
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದ ಗುರುಮಧ್ವ ಮುನಿರಾಯಾ ॥ 5 ||
***
Anandatirtharembo Arthiya Pesarulla Gurumadhva Muniraya।
Enembe Na Ninna Karunakke Enegane Gurumadhva Muniraya॥ Pa ||
Besarade Sarvarolu Svasa Japagala Madi Gurumadhva Muniraya |
Srisagarpisuta Ninna Dasarannu Salahide Gurumadhva Muniraya।| 1 ||
Andu Hanumantanagi Bandu Sugrivage Gurumadhva Muniraya |
Andavada Padavittanandadinda Salahide Gurumadhva Muniraya॥ 2 ||
Kuntiya Kumaranagi Hanta Kauravara Konde Gurumadhva Muniraya।
Ananta Punyagalisi Srikantanige Arpiside Gurumadhva Muniraya॥ 3 ||
Advaitaranu Kadi Geddu Ninna Bhaktarige Gurumadhva Muniraya।
Sud’dha Tatparyavakya Pad’dhatiya Torisidi Gurumadhva Muniraya॥ 4 ||
Gurupranesa Viththala Paranendu Danguruva Gurumadhva Muniraya।
Sari Sajjanarige Hariya Loka Torisida Gurumadhva Muniraya॥ 5 ||
***
pallavi
aanaMdateerthareMbO artheeya pesaruLLa gurumadhva muniraaya | EneMbe naa ninna karuNakke eNegaaNe gurumadhva muniraaya ||
caraNam 1
bEsarade sarvaroLu shwaasajapagaLa maaDi gurumadhva muniraaya |
shreeshagarpisutta ninna daasarannu salahide gurumadhva muniraaya || 1 ||
caraNam 2
aMdu hanumaMtanaagi baMda sugreevage gurumadhva muniraaya |
aMdavaada padavittaanaMdadiMda salahide gurumadhva muniraaya || 2 ||
caraNam 3
kuMtee kumaaranaagi haMta kouravara koMde gurumadhva muniraaya |
anaMta puNya gaLisi shreekaaMtagarpiside gurumadhva muniraaya || 3 ||
caraNam 4
adhvaitaranu kaadi geddu ninna bhaktarige gurumadhva muniraaya |
shuddha taatparyavaakya paddatiya tOriside gurumadhva muniraaya || 4 ||
caraNam 5
gurupraaNEshaviThalana paraneMdu DaMgUrava gurumadhva muniraaya |
saari sajjanarige hariya lOka tOrisidi gurumadhva muniraaya || 5 ||
?
***
No comments:
Post a Comment