Saturday, 11 December 2021

ನಾರಾಯಣನ ನೆನೆ ವರ್ಣಿಸು ಮನ್ನಿಸು ಆರಾಧನೆಗಳ ಮಾಡುತ ankita hayavadana NARAYANA NENE VARNISU MANNISU AARAADHANEGALA



ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನ ಪ.


ಅವನ ಶ್ರವಣ ಮನನ ನಿಧಿಧ್ಯಾಸನಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳುಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊಜೀವನ ಜವನಬಾಧೆಯ ತಪ್ಪಿಸಿಪಾವನ ವೈಕುಂಠಪುರದೊಳಗೆಂದೆಂದುಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ 1


ಲೋಕದಿ ವರಂ ವರಯ ಭದ್ರಂತೆಋತೆ ಕೈವಲ್ಯಮಾತ್ಮನಃಏಕಮೇವೇಶ್ವÀರಸ್ತ ಸಾದ್ಭಗವಾನ್ ವಿಷ್ಣುರವ್ಯಯ ಎಂಬಾಈ ಕಲಿಯುಗದಲಿ ಬೇಕಾದ ಪುರಾಣಾದಿವಾಕುವಿವೇಕವ ಮನದಿ ವಿಚಾರಿಸಿಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯಮತವ 2


ದ್ವಾರಾವತಿಯ ಗೋಪಿಚಂದನದಿಂದಶ್ರೀರÀಮಣನ ವರ ನಾಮವ ನೆನೆ-ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖಧಾರಣವನು ಭುಜಯುಗದಲಿ ಮಾಡಿಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು 3


ಹರಿ ನಿರ್ಮಾಲ್ಯವ ಶಿರದಿ ಧರಿಸುತಿರುಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊಹರಿಪದ ತೀರ್ಥದ ನೇಮವಬಿಡದಿರುಹರಿಪರದೇವತೆ ಎಂದರುಪುತಲಿರುಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು 4


ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟುಕಾಯ್ವನು ಶಕ್ರನಿಗೆ ತ್ರಿವಿಷ್ಟಪಪಟ್ಟವ ಕಟ್ಟಿದವದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ ವಿಠಲ ಬಹು ದಿಟ್ಟ 5


ಕಂದ ಬಾಯೆಂದರೆ ನಂದನಿಗೊಲಿದಿಹಕುಂದುಕೊರತೆ ಬಂದರೆ ನೊಂದುಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ 6


ಓಡುವ ಅಡಗುವ ದೇವರೆ ಬಲ್ಲರುಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] 7


ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ 8


ಸಿರಿದೇವಿ ಆವನಿಗರಸಿ ಸುರರ ಗುರುವಿರಿಂಚಿ ಪವನರು ಆವನ ಕುವರರೆಂಬರುಉರಗಾಧಿಪನಾವನ ಮಂಚ ವಿಹಗೇಶ್ವರನಾವನ ವಾಹನಪುರಹರನಾವನುಂಗುಟನೀರಪೊತ್ತ ನಿ-ರ್ಜರ ಪತಿ ಆವನ ಚರಣಸೇವಕನಾದಸುರರೊಳಗೀ ಹಯವದನಗಿನ್ನಾರನು ಸರಿಯೆಂದುಸುರುವೆನೊ 9

***

 

No comments:

Post a Comment