Friday, 27 December 2019

ಅಳಬ್ಯಾಡೆಲವೋ ರಂಗಮ್ಮ ನಿಮ್ಮ ankita vasudeva vittala ALABYADELAVO RANGAMMA NIMMA

Audio by Vidwan Sumukh Moudgalya



ಶ್ರೀ ವ್ಯಾಸತತ್ವಜ್ಞತೀರ್ಥರ ಕೃತಿ 

 ರಾಗ : ಕೇದಾರಗೌಳ   ಆದಿತಾಳ 

ಅಳಬ್ಯಾಡೆಲವೊ ರಂಗಮ್ಮ ನಿನ್ನ
ಇಳಿಯಾರ ನೋಡುತಿದೆ ಗುಮ್ಮ॥ಪ॥

ಒದರಿದರೆ ಕೇಳೆಲೆವೊ ತಮ್ಮಾ  ಅದು
ಅದರುತಿದೆ ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮತಮ್ಮ  ನಿಜ
ಸದನ ಬಿಡುತಿಹರು ನೋಡಮ್ಮ ॥೧॥

ಬೆರಳುಗರು ಗಾಯಗಳಿಂದ  ಆ
ದುರುಳನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ ತನ್ನ
ಕೊರಳಲಿ ಹಾಕಿಹ್ಯ ಚಂದ॥೨॥

ಏಸು ದೈತ್ಯರಾಸಿಗಳನು ತಾನು
ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿರುವ
 ವಾಸುದೇವವಿಟ್ಠಲ ನೀನು॥೩॥
****

by ವ್ಯಾಸತತ್ವಜ್ಞರು
ಅಳಬ್ಯಾಡೆಲವೋ ರಂಗಮ್ಮ ನಿಮ್ಮ
ಇಳಿಯಾರ ನೋಡುತಿದೆ ಗುಮ್ಮ||ಪ||

ಒದರಿದರೆ ಕೇಳೆಲವೋ ತಮ್ಮಾ, ಅದು
ಅದರುತಿದೆ  ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮ್ಮತಮ್ಮ , ನಿಜ
ಸದನ ಬಿಡುತಿಹರು ನೋಡಮ್ಮ ||೧||

ಬೆರಳುಗುರು ಗಾಯಗಳಿಂದ ಆ
ದುರುಳರನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ , ತನ್ನ
ಕೊರಳಲಿ ಹಾಕಿಹ ಚಂದ  ||೨||

ಏಸು ದೈತ್ಯರಾಸಿಗಳನು
ತಾನು ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿ-ರುವ
ವಾಸುದೇವ ವಿಟ್ಠಲ ನೀನು ||೩||
********


No comments:

Post a Comment