Monday, 18 November 2019

ಶ್ರೀವೈಕುಂಠಕೆ ಸರಿಯಾದ ದ್ವಾರಕೆಯಲಿ ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.

ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1

ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2

ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3

ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4

ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5

ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6

ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7

ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8

ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9

ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10

ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11

ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12

ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
********

No comments:

Post a Comment