Monday 18 November 2019

ಶ್ರೀಕಾಂತೊಲಿದ ದಾಸ ರೀ ಕಲಿಯುಗದಲ್ಲಿ ankita pranesha vittala

by ಪ್ರಾಣೇಶದಾಸರು
ಶ್ರೀಕಾಂತೊಲಿದ ದಾಸ | ರೀ ಕಲಿಯುಗದಲ್ಲಿ |ಲೇಖಾಂಶರಹುದೇ ತಂಗೀ ||ಶೋಕಬ್ಯಾಡೆಲೆ ನರಲೋಕ ಉಳಿದರೆಂದು |ಈ ಕಂಭದೊಳಗಿಹರೇ ಹೇ ನೀರೇ ಪ

ಆ ಸೇತೂ ಮೊದಲಾದ ಹಿಮಾಶೈಲಪರಿಯಂತ|ಸೂಸಿಹದಿವರ ಕೀರ್ತಿ ||ಯೇಸು ಬಗಿಯಲಿಂದ ಸೋಸಿ ನೋಡಿದರನ್ನ |ಪಾಸಟಿ ಯನಿಸದಲ್ಲೇ | ಯೇ ನಲ್ಲೇ 1

ನರಮೋಹನಾರ್ಥವಾದರು ಲೌಕೀಕೆಂಬುದೂ |ಅರಿಯಾರು ಸ್ವಪ್ನದಲ್ಲೀ ||ಧರಿಯೊಳಖಿಲ ಸಜ್ಜನರು ಪರೀಕ್ಷಿಸಿಹರು |ಬರಿದೆ ಸ್ತವನವಲ್ಲಾವೆ | ಕೇಳಲವೇ2

ಹರಿಕೃಪಿನೋಡುಇವರಿಗೆ ಜನರು ಎಷ್ಟು |ಜರಿದಾರು ಮನ್ನಿಪರೂ ||ಕರಣತ್ರಯದ ಶುದ್ಧರೆರಡು ಮಾರ್ಗವ ಬಲ್ಲ |ವರು ನಿತ್ಯಾಚರಿಸಿದರೂ | ಹಿರಿಯಾರೂ 3

ಇವರಂದ ನುಡಿಯನು ಭವಕೆ ತಂದರೆ ಲೇಶ |ಭವದುಃಖವಾಗದಲ್ಲಾ ||ಜವದೊರವದು ಮುಕ್ತಿ ಜವನ ಬಾಧಿಲ್ಲಾಶು |ಕವಿಕುಲ ತಿಲಕರಿಗೇ | ನೀ ಯರಗೇ 4

ಖಳಹ ಪ್ರಾಣೇಶ ವಿಠ್ಠಲನ ಚರಿತೆ ಪದಗಳಲಿ ಬಣ್ಣಿಸಿ ಸಂತತೀ |ನಿಲಸಿ ಜ್ಞಾನಿಗಳನ್ನು ತಲಿ ತೂಗಿಸಿದರು ಪೇ |ಳಲು ಎನ್ನ ಮತಿ ಸಾಲದೂ | ಸತ್ಯವಿದೂ 5
******

No comments:

Post a Comment