Wednesday, 1 September 2021

ಭೋ ದಾತಾ ಬಾರೋಗುರುವರಿಯಾ ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ ankita shyamasundara

..

ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ

ಪಾದ ಭೂನಾಥ ದಾಸಾಗ್ರಣಿ ಪ


ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ

ನೆರೆ ಪೊಂದಿದೆನೈ ಅನುದಿನ ಪಾಲಿಸು ಘನ

ಹರಿನಾಮವ | ಸ್ತಂಭ ನಿವಾಸನೆ ದಯತೋರೋ 1


ಪೋತನೊಳೀಪರಿ ಯಾತಕೆ ನಿರ್ದಯ ತಾತನೆ

ನಿನಗೆ ರೀತಿಯ ನೋಡೈ | ಸುತನಪರಾಧವ

ಹಿತದಲಿ ಮನ್ನಿಸು ಪಾತಕ ಬಿಡಿಸೊ ಮತಿ ಬೀರೋ 2


ಕರುಣಿಸು ಶಾಮಸುಂದರ ವಿಠಲ | ವರಿಚರಿ

ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ

ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ 3

***

 

No comments:

Post a Comment