Wednesday, 1 September 2021

ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ankita neleyadikeshava

 ..

ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ಪ


ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ ಅ


ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನುಪಾಯದಿಂದ ಹೇಮದಂತೆ ಬಣ್ಣಗಟ್ಟಿಬಾಯ ಬಡಿದು ತಂದು ತಂದುಕಾಯ ಕಳದೆನಲ್ಲದೆ 1


ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆಪಂಚಬಾಣನಯ್ಯ ಕಾಯೊ ಎನ್ನವಗುಣಗಳನೆಣಿಸದೆ2


ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆಉಕ್ಕಿ ಸವಿದು ಮನುಜರೊಡನೆಸೊಕ್ಕಿ ದಿನವ ಕಳೆದೆನೆನಗೆತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ3

***


No comments:

Post a Comment